ವಾಷಿಂಗ್ಟನ್: ಭಯೋತ್ಪಾದನೆ, ಯುಎನ್‌ಎಸ್‌ಸಿ ಸುಧಾರಣೆಗಳ ಬಗ್ಗೆ ಮಾತನಾಡಲು ಭಾರತವು ತನ್ನ ಧ್ವನಿಯನ್ನು ಬಳಸುತ್ತದೆ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್ ತಿರುಮೂರ್ತಿ ಹೇಳಿದ್ದಾರೆ.
"ಭಯೋತ್ಪಾದನೆ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಭಾರತ ಧ್ವನಿ ಎತ್ತಲಿದೆ".. ತಿರುಮೂರ್ತಿ ಘೋಷಣೆ - affordable vaccines
"ಕೊರೊನಾ ಸಾಂಕ್ರಾಮಿಕ ಮತ್ತು ಅದರ ಮಾನವೀಯ ಪ್ರಭಾವದ ಹೊರತಾಗಿ ಇತರ ಸಮಸ್ಯೆಗಳು 76ನೇ ಯುಎನ್ಜಿಎಯಲ್ಲಿ ಮೇಲುಗೈ ಸಾಧಿಸಬಹುದು. ಜಾಗತಿಕ ಆರ್ಥಿಕ ಕುಸಿತ, ಭಯೋತ್ಪಾದನೆ, ಹವಾಮಾನ ಬದಲಾವಣೆ, ಅಫ್ಘಾನಿಸ್ತಾನದಲ್ಲಿನ ಇತ್ತೀಚಿನ ಬೆಳವಣಿಗೆಗಳು, ಯುಎನ್‌ಎಸ್‌ಸಿ ಸುಧಾರಣೆಗಳು ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ" ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್ ತಿರುಮೂರ್ತಿ ಹೇಳಿದ್ದಾರೆ.

"ಕೊರೊನಾ ಸಾಂಕ್ರಾಮಿಕ ಮತ್ತು ಅದರ ಮಾನವೀಯ ಪ್ರಭಾವದ ಹೊರತಾಗಿ ಇತರ ಸಮಸ್ಯೆಗಳು 76ನೇ ಯುಎನ್ಜಿಎಯಲ್ಲಿ ಮೇಲುಗೈ ಸಾಧಿಸಬಹುದು. ಜಾಗತಿಕ ಆರ್ಥಿಕ ಕುಸಿತ, ಭಯೋತ್ಪಾದನೆ, ಹವಾಮಾನ ಬದಲಾವಣೆ, ಅಫ್ಘಾನಿಸ್ತಾನದಲ್ಲಿನ ಇತ್ತೀಚಿನ ಬೆಳವಣಿಗೆಗಳು, ಯುಎನ್‌ಎಸ್‌ಸಿ ಸುಧಾರಣೆಗಳು ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ" ಎಂದು ತಿರುಮೂರ್ತಿ ಹೇಳಿದರು.
"ಭಾರತವು ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರಮುಖ ಧ್ವನಿಯಾಗಿ ಹಾಗೂ ಯುಎನ್‌ಎಸ್‌ಸಿಯ ಸದಸ್ಯನಾಗಿ ತನ್ನ ಧ್ವನಿಯನ್ನು ಹವಾಮಾನ ಬದಲಾವಣೆ, ಸುಸ್ಥಿರ ಅಭಿವೃದ್ಧಿ ಗುರಿಗಳು, ಲಸಿಕೆಗಳಿಗೆ ಸಮಾನ ಬಳಕೆ, ಬಡತನ ನಿರ್ಮೂಲನೆ ಮತ್ತು ಆರ್ಥಿಕ ಚೇತರಿಕೆ, ಮಹಿಳಾ ಸಬಲೀಕರಣದಂತಹ ಜಾಗತಿಕ ಸಮಸ್ಯೆಗಳ ಬಗ್ಗೆ ಮಾತನಾಡಲು ಬಳಸುತ್ತದೆ" ಎಂದು ಅವರು ಹೇಳಿದರು.