ನವದೆಹಲಿ:ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ದುಬೈನಲ್ಲಿ ನಡೆಯಲಿರುವ 'ವರ್ಲ್ಡ್ ಎಕ್ಸ್‌ಪೋ' ಅಥವಾ 'ವಿಶ್ವ ಮೇಳ' (World Expo)ದಲ್ಲಿ 'ಮನಸ್ಸುಗಳನ್ನು ಬೆಸೆಯುತ್ತಾ, ಭವಿಷ್ಯವನ್ನು ರೂಪಿಸುತ್ತಾ' ಎಂಬ ಘೋಷವಾಕ್ಯದೊಂದಿಗೆ ಭಾರತ ಭಾಗವಹಿಸಲಿದ್ದು, ಬಾಹ್ಯಾಕಾಶ ತಂತ್ರಜ್ಞಾನ ಸೇರಿದಂತೆ 11 ವಿಷಯಗಳನ್ನು ಪ್ರದರ್ಶಿಸಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಬೀತಾಗಿರುವ ಪರಾಕ್ರಮದ ಜೊತೆ ಔಷಧ, ರತ್ನಾಭರಣ, ಸ್ಟಾರ್ಟ್ ಅಪ್, ಆಹಾರ ಸಂಸ್ಕರಣೆ, ಪ್ರಾಚೀನ ಪರಂಪರೆ ಮತ್ತು ಸಂಸ್ಕೃತಿಯಂತಹ 11 ಕ್ಷೇತ್ರಗಳಲ್ಲಿ ಭಾರತವು ತನ್ನ ನಾಯಕತ್ವದ ಪಾತ್ರವನ್ನು ಜಗತ್ತಿಗೆ ಪ್ರಸ್ತುತಪಡಿಸಲಿದೆ. 192 ದೇಶಗಳು ವರ್ಲ್ಡ್ ಎಕ್ಸ್‌ಪೋದಲ್ಲಿ ಭಾಗವಹಿಸಲಿದ್ದು, 'ಕನೆಕ್ಟಿಂಗ್ ಮೈಂಡ್ಸ್, ಕ್ರಿಯೇಟಿಂಗ್ ದಿ ಫ್ಯೂಚರ್' - ಇದು ಭಾರತ ಪ್ರದರ್ಶನದ ಘೋಷವಾಕ್ಯವಾಗಿವೆ ಎಂದು ಕೇಂದ್ರ ಬಾಹ್ಯಾಕಾಶ ಇಲಾಖೆಯ ರಾಜ್ಯ ಸಚಿವ ತೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ.