ನವದೆಹಲಿ:ಕೋವಿಡ್ 2ನೇ ಅಲೆಯ ಉಲ್ಬಣದ ನಡುವೆ ದೇಶದ ವಿವಿಧ ರಾಜ್ಯಗಳಲ್ಲಿ ಲಸಿಕೆಯ ಅಭಾವವಿದ್ದು, ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ. ದೇಶೀಯ ಲಸಿಕೆಯಲ್ಲದೇ ಅಕ್ಟೋಬರ್ ವೇಳೆಗೆ ಇನ್ನೂ 5 ಕೊರೊನಾ ವ್ಯಾಕ್ಸಿನ್ಗಳು ಭಾರತದಲ್ಲಿ ಲಭ್ಯವಾಗಲಿವೆ.
ಭಾರತದಲ್ಲಿ ಪ್ರಸ್ತುತ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಎಂಬ ದೇಶೀಯ ಲಸಿಕೆಗಳನ್ನು ಜನರಿಗೆ ನೀಡಲಾಗುತ್ತಿದೆ. 2021ರ ಮೂರನೇ ತ್ರೈಮಾಸಿಕದೊಳಗಾಗಿ ಸ್ಪುಟ್ನಿಕ್ ವಿ, ಜಾನ್ಸನ್ ಮತ್ತು ಜಾನ್ಸನ್, ಸೀರಂನ ನೊವಾವಾಕ್ಸ್, ಝೈಡಸ್ ಕ್ಯಾಡಿಲಾದ ಲಸಿಕೆ ಹಾಗೂ ಭಾರತ್ ಬಯೋಟೆಕ್ನ ಇಂಟ್ರಾನಾಸಲ್ ಲಸಿಕೆ - ಈ ಐದು ಲಸಿಕೆಗಳನ್ನು ನಿರೀಕ್ಷಿಸಬಹುದು. ಹಾಗೆಯೇ ಯಾವುದೇ ಲಸಿಕೆಯ ತುರ್ತು ಬಳಕೆ ಅನುಮೋದನೆ ನೀಡುವಲ್ಲಿ ಸುರಕ್ಷತೆ ಮತ್ತು ಪರಿಣಾಮಕಾರಿತ್ವವೇ ಕೇಂದ್ರ ಸರ್ಕಾರದ ಮೊದಲ ಆದ್ಯತೆಯಾಗಿರುತ್ತದೆ ಎಂದು ಮೂಲಗಳು ತಿಳಿಸಿವೆ.