ಕರ್ನಾಟಕ

karnataka

By

Published : Jan 17, 2022, 5:58 PM IST

ETV Bharat / bharat

'ಮಾರ್ಚ್​ ತಿಂಗಳಲ್ಲಿ 12ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕೋವಿಡ್‌ ವ್ಯಾಕ್ಸಿನ್​​'

ಬರುವ ಮಾರ್ಚ್​ ತಿಂಗಳಿಂದ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೋವಿಡ್​ ವ್ಯಾಕ್ಸಿನ್ ನೀಡಲಾಗುವುದು ಎಂದು ಕೇಂದ್ರ ಸರ್ಕಾರದ ನೀತಿ ಆಯೋಗದ ಮುಖ್ಯಸ್ಥರು ತಿಳಿಸಿದ್ದಾರೆ.

Vaccine to 12-14 year old
Vaccine to 12-14 year old

ನವದೆಹಲಿ: ದೇಶದಲ್ಲಿ ಮೂರನೇ ಹಂತದ ಕೋವಿಡ್ ಅಲೆ ಜೋರಾಗಿದ್ದು, ಪ್ರತಿದಿನ ಲಕ್ಷಾಂತರ ಸೋಂಕಿತ ಪ್ರಕರಣಗಳು ದಾಖಲಾಗುತ್ತಿವೆ. ಇದೀಗ ಕೇಂದ್ರ ಆರೋಗ್ಯ ಇಲಾಖೆ ಕೋವಿಡ್​ ನಿರ್ಮೂಲನೆಗೆ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.

ಈ ವರ್ಷದ ಮಾರ್ಚ್​​​ ತಿಂಗಳಿಂದ 12ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕೋವಿಡ್​ ವ್ಯಾಕ್ಸಿನ್​ ನೀಡಲು ಆರಂಭಿಸಲಾಗುವುದು ಎಂದು ನೀತಿ ಆಯೋಗದ ಮುಖ್ಯಸ್ಥ ಡಾ.ಎನ್.​ಕೆ.ಅರೋರಾ ತಿಳಿಸಿದ್ದಾರೆ. ಖಾಸಗಿ ಸುದ್ದಿವಾಹಿನಿವೊಂದರಲ್ಲಿ ಮಾತನಾಡಿರುವ ಅವರು, 12 ವರ್ಷ ಮೆಲ್ಪಟ್ಟ ಮಕ್ಕಳಿಗೆ ವ್ಯಾಕ್ಸಿನೇಷನ್ ನೀಡಲು ಎಲ್ಲ ರೀತಿಯ ಯೋಜನೆ ರೂಪಿಸಿಕೊಳ್ಳಲಾಗಿದೆ ಎಂದಿದ್ದಾರೆ. ಅರೋರಾ ಕೇಂದ್ರ ಸರ್ಕಾರದ ಕೋವಿಡ್​​-19 ಕಾರ್ಯಕಾರಿ ಗುಂಪಿನ ರಾಷ್ಟ್ರೀಯ ತಾಂತ್ರಿಕ ಸಲಹಾ ಅಧ್ಯಕ್ಷರಾಗಿಯೂ ಕೆಲಸ ಮಾಡ್ತಿದ್ದಾರೆ.

ಇದನ್ನೂ ಓದಿ:ಕೋಳಿ ಅಂಕದ ಜಾಗದಲ್ಲೇ Mobile ATM ಸೇವೆ; ಬ್ಯಾಂಕ್‌ ಸೌಕರ್ಯಕ್ಕೆ ಜೂಜಾಡುವವರು ಖುಷ್‌!

ಕಳೆದ ವರ್ಷ ಜನವರಿ 16ರಿಂದ ದೇಶದಲ್ಲಿ ಕೋವಿಡ್ ವ್ಯಾಕ್ಸಿನ್​ ನೀಡುವ ಕಾರ್ಯ ಆರಂಭಿಸಲಾಗಿದ್ದು, ಒಂದು ವರ್ಷ ಮುಕ್ತಾಯಗೊಂಡಿದೆ. ಇಲ್ಲಿಯವರೆಗೆ ಒಟ್ಟು 157 ಕೋಟಿ ಡೋಸ್​ ನೀಡಲಾಗಿದೆ.

ABOUT THE AUTHOR

...view details