ವಿಶಾಖಪಟ್ಟಣಂ: 3,500 ಕಿ.ಮೀ. ದೂರ ಕ್ರಮಿಸಬಲ್ಲ ಪರಮಾಣು ಸಾಮರ್ಥ್ಯದ ಜಲಾಂತರ್ಗಾಮಿ ಲಾಂಚರ್ ಕೆ-4 ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ನೀರೊಳಗಿನ ನಿಗದಿತ ಸ್ಥಳದಿಂದ ಭಾರತ ಯಶಸ್ವಿ ಪ್ರಾಯೋಗಿಕ ಪರೀಕ್ಷೆ ನಡೆಸಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮೂಲಗಳು ತಿಳಿಸಿವೆ.
ಸ್ವದೇಶಿ ನಿರ್ಮಿತ ಪರಮಾಣು ಸಾಮರ್ಥ್ಯದ ಜಲಾಂತರ್ಗಾಮಿ ಕೆ-4 ಕ್ಷಿಪಣಿ ಪರೀಕ್ಷೆ ಯಶಸ್ವಿ - ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ
3,500 ಕಿ.ಮೀ. ದೂರ ಕ್ರಮಿಸಬಲ್ಲ ಪರಮಾಣು ಸಾಮರ್ಥ್ಯದ ಜಲಾಂತರ್ಗಾಮಿ ಲಾಂಚರ್ ಕೆ-4 ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ನೀರೊಳಗಿನ ನಿಗದಿತ ಸ್ಥಳದಿಂದ ಭಾರತ ಯಶಸ್ವಿಯಾಗಿ ಪ್ರಾಯೋಗಿಕ ಪರೀಕ್ಷೆ ನಡೆಸಿದೆ.
ಭಾನುವಾರ ಮಧ್ಯಾಹ್ನ ವಿಶಾಖಪಟ್ಟಣಂ ಕರಾವಳಿ ಭಾಗದಲ್ಲಿ ಯಶಸ್ವಿಯಾಗಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ.ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಈ ಕ್ಷಿಪಣಿಗಳನ್ನು ಪರಮಾಣು ಚಾಲಿತ ಅರಿಹಂತ್ನಂತಹ ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಗಳಲ್ಲಿ ಅಳವಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಈ ಕ್ಷಿಪಣಿಗಳನ್ನು ಒಮ್ಮೆ ಸೇರಿಸಿಕೊಂಡರೆ ಸ್ಥಳೀಯ ಬ್ಯಾಲಿಸ್ಟಿಕ್ ಕ್ಷಿಪಣಿ (ಎಸ್‌ಎಸ್‌ಬಿಎನ್) ಅರಿಹಂತ್ಗೆ ಮುಖ್ಯ ಬಲವಾಗಲಿದೆ. ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಗಳಿಂದಲೇ ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯವನ್ನು ಭಾರತ ಹೊಂದಲಿದೆ.ಈಕ್ಷಿಪಣಿ 1.3 ಮೀಟರ್ ವ್ಯಾಸ ಹೊಂದಿದ್ದು, 12 ಮೀಟರ್ ಉದ್ದವಿದೆ ಎಂದು ವರದಿಯಾಗಿದೆ. ಇದರ ತೂಕ ಸುಮಾರು 17 ಟನ್ ಆಗಿದೆ.
ಕೆ-4 ಅಭಿವೃದ್ಧಿಪಡಿಸುವ ಮೊದಲು ಅನೇಕ ಬಾರಿ ಪರೀಕ್ಷೆ ನಡೆಸಲಾಗಿದೆ. ಕ್ಷಿಪಣಿಯನ್ನು ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಕರಾವಳಿಯಿಂದ 45 ನಾಟಿಕಲ್ ಮೈಲಿ ದೂರದಲ್ಲಿರುವ ಐಎನ್ಎಸ್ ಅರಿಹಂತ್ನಿಂದ ಮಾರ್ಚ್ 31, 2016ರಂದು ಮೊದಲಿಗೆ ಪರೀಕ್ಷೆ ನಡೆಸಲಾಗಿತ್ತು.