ಕರ್ನಾಟಕ

karnataka

By

Published : Jun 17, 2021, 8:00 PM IST

ETV Bharat / bharat

ಸೈಬರ್ ಒಳನುಸುಳುವಿಕೆ ಮೂಲಕ ಭಾರತದ ಮೇಲೆ ಗುರಿ: ಚೀನಾದ ಮತ್ತೊಂದು ಕುತಂತ್ರ ಬುದ್ದಿ ಬಯಲು

ರೆಡ್‌ಫಾಕ್ಸ್ಟ್ರಾಟ್ 2014 ರಿಂದ ಸಕ್ರಿಯವಾಗಿದ್ದು, ಪ್ರಾಥಮಿಕವಾಗಿ ಏರೋಸ್ಪೇಸ್ ಮತ್ತು ಡಿಫೆನ್ಸ್, ದೂರಸಂಪರ್ಕ, ಗಣಿಗಾರಿಕೆ ಮತ್ತು ಸಂಶೋಧನಾ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡಿದೆ.

india-targeted-through-cyber-intrusions-by-redfoxtrot-linked-to-chinese-military
india-targeted-through-cyber-intrusions-by-redfoxtrot-linked-to-chinese-military

ನವದೆಹಲಿ: ಚೀನಾಗೆ ಭಾರತದ ಮೇಲೆ ಯಾಕಿಷ್ಟು ಆಕರ್ಷಣೆಯೋ ಏನೋ . ಒಂದಲ್ಲ ಒಂದು ರೀತಿಯಲ್ಲಿ ಭಾರತದ ಮೇಲೆ ತನ್ನ ಕಳ್ಳ ಕಣ್ಣಿಡುತ್ತಲೇ ಬರುತ್ತಿದೆ. ಈಗ ಇಂಥಹುದ್ದೇ ಘಟನೆ ಬೆಳಕಿಗೆ ಬಂದಿದೆ. ಚೀನಾದ ಸೈನ್ಯವು ಈಗ ಹೊಸ ಹೆಜ್ಜೆ ಇಟ್ಟಿದ್ದು, ಸೈಬರ್ ಒಳನುಸುಳುವಿಕೆಯ ಮೂಲಕ ಭಾರತವನ್ನು ಗುರಿಯಾಗಿಸಿಕೊಂಡಿದೆ ಎಂದು ಬಹಿರಂಗವಾಗಿದೆ.

ಸೈಬರ್ ಒಳನುಸುಳುವಿಕೆಯ ಮೂಲಕ ಚೀನಾದ ಸೇನೆಯು ಗಣಿಗಾರಿಕೆ ಮತ್ತು ಸಂಶೋಧನಾ ಸಂಸ್ಥೆ, ಭಾರತದ ಏರೋಸ್ಪೇಸ್ ಮೇಲೆ ಕಣ್ಣಿಟ್ಟಿದೆ ಎಂದು ತಿಳಿದು ಬಂದಿದೆ. ಇದಕ್ಕಾಗಿ ಅವರು ರೆಡ್‌ಫಾಕ್ಸ್ಟ್ರಾಟ್‌ನ ಸಹಾಯ ತೆಗೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ರೆಡ್‌ಫಾಕ್ಸ್ಟ್ರಾಟ್ 2014 ರಿಂದ ಸಕ್ರಿಯವಾಗಿದ್ದು, ಪ್ರಾಥಮಿಕವಾಗಿ ಬಾಹ್ಯಾಕಾಶ ಮತ್ತು ರಕ್ಷಣೆ, ದೂರಸಂಪರ್ಕ, ಗಣಿಗಾರಿಕೆ ಮತ್ತು ಸಂಶೋಧನಾ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡಿದೆ.

ವಿಶ್ವದ ಅತಿದೊಡ್ಡ ಗುಪ್ತಚರ ಸಂಗ್ರಹ ಸಂಸ್ಥೆ ರೆಕಾರ್ಡ್ಡ್ ಫ್ಯೂಚರ್ ಈ ಮಾಹಿತಿಯನ್ನು ಬಯಲಿಗೆಳೆದಿದೆ. ಇದು ಚೀನಾದ ಮಿಲಿಟರಿ ಗುಪ್ತಚರ ವ್ಯವಸ್ಥೆ ಮತ್ತು ರೆಡ್‌ಫಾಕ್ಸ್ಟ್ರಾಟ್ ನಡುವಿನ ವಿಶೇಷ ಸಂಬಂಧವನ್ನು ಗುರುತಿಸಿದೆ. ಏಷ್ಯಾದ ದೇಶಗಳ ಗಡಿಯಲ್ಲಿ ಉದ್ದೇಶಿತ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಒಳನುಸುಳುವಿಕೆ ಪತ್ತೆ ಮಾಡಿದೆ.

2014 ರಿಂದ ಸಕ್ರಿಯವಾಗಿರುವ ರೆಡ್‌ಫಾಕ್ಸ್‌ಟ್ರಾಟ್ ಪ್ರಾಥಮಿಕವಾಗಿ ಏರೋಸ್ಪೇಸ್ ಮತ್ತು ಡಿಫೆನ್ಸ್, ಸರ್ಕಾರ, ದೂರಸಂಪರ್ಕ, ಗಣಿಗಾರಿಕೆ ಮತ್ತು ಸಂಶೋಧನಾ ಸಂಸ್ಥೆಗಳ ಮೇಲೆ ಕಣ್ಣಿಟ್ಟಿದೆ, ಇದರಲ್ಲಿ ಅಫ್ಘಾನಿಸ್ತಾನ, ಭಾರತ, ಕಜಕಿಸ್ತಾನ್, ಕಿರ್ಗಿಸ್ತಾನ್, ಪಾಕಿಸ್ತಾನ, ತಜಿಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್‌ ಮೇಲೆ ತನ್ನ ಸೈಬರ್​ ದಾಳಿಯ ಗುರಿ ಇರಿಸಿದೆ.

ABOUT THE AUTHOR

...view details