ನವದೆಹಲಿ:ಕೊರೊನಾ ವೇಳೆ ವಾಪಸ್ಸಾದ ಚೀನಾದಲ್ಲಿ ವ್ಯಾಸಂಗ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿಗಳಿಗೆ ಮರಳಿ ವಿದ್ಯಾಭ್ಯಾಸ ಮಾಡಲು ಅವಕಾಶ ಮಾಡಿಕೊಡದ ಕ್ರಮದ ವಿರುದ್ಧ ಭಾರತ ಸಿಡಿದೆದ್ದಿದೆ. ಇದಕ್ಕೆ ಪ್ರತ್ಯುತ್ತರವಾಗಿ ಚೀನಾದ ನಾಗರಿಕರಿಗೆ ನೀಡಲಾದ ಪ್ರವಾಸಿ ವೀಸಾಗಳನ್ನು ಭಾರತ ಅಮಾನತು ಮಾಡಿದೆ. ಚೀನಾದ ಪ್ರಜೆಗಳಿಗೆ ನೀಡಲಾದ ಪ್ರವಾಸಿ ವೀಸಾಗಳನ್ನು ಭಾರತ ಅಮಾನತುಗೊಳಿಸಿದೆ ಎಂದು ಜಾಗತಿಕ ವಿಮಾನಯಾನ ಸಂಸ್ಥೆಯಾದ ಇಂಟರ್‌ನ್ಯಾಶನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ (ಐಎಟಿಎ) ತಿಳಿಸಿದೆ.
ಚೀನಾದ ವಿಶ್ವವಿದ್ಯಾಲಯಗಳಲ್ಲಿ ಸುಮಾರು 22 ಸಾವಿರ ಭಾರತೀಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಕೊರೊನಾ ಉಲ್ಬಣಗೊಂಡ ಬಳಿಕ ದೇಶಕ್ಕೆ ವಾಪಸ್ಸಾಗಿದ್ದರು. ಇದೀಗ ಚೀನಾಕ್ಕೆ ಮರಳಲು ಆ ದೇಶ ಅವಕಾಶ ಮಾಡಿಕೊಡುತ್ತಿಲ್ಲ. ಹೀಗಾಗಿ ನೆರೆಯ ದೇಶಕ್ಕೆ ಪಾಠ ಕಲಿಸಲು ಭಾರತ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.