ಕರ್ನಾಟಕ

karnataka

ETV Bharat / bharat

ಮಾನವೀಯತೆ ನೆರವು: ಅಫ್ಘಾನಿಸ್ತಾನಕ್ಕೆ ಭಾರತದಿಂದ 5 ಲಕ್ಷ ಕೋವಿಡ್​​ ಲಸಿಕೆ ಪೂರೈಕೆ - ಅಪ್ಘಾನಿಸ್ತಾನಕ್ಕೆ ಭಾರತ ಕೋವಿಡ್ ಲಸಿಕೆ ರವಾನೆ

India supplies Covid vaccines to Afghanistan: ಅಫ್ಘಾನಿಸ್ತಾನದಲ್ಲಿ ಅರಾಜಕತೆ ಉಂಟಾಗಿದ್ದು, ಅಲ್ಲಿನ ಜನರು ಇನ್ನಿಲ್ಲದಂತೆ ಸಮಸ್ಯೆ ಎದುರಿಸುತ್ತಿದ್ದಾರೆ. ಅವರ ನೆರವಿಗೆ ಧಾವಿಸಿರುವ ಭಾರತ ಅಗತ್ಯ ಸಹಾಯ ನೀಡುತ್ತಿದೆ.

India supplies Covid vaccines to Afghanistan
India supplies Covid vaccines to Afghanistan

By

Published : Jan 1, 2022, 3:23 PM IST

ನವದೆಹಲಿ:ಅಫ್ಘಾನಿಸ್ತಾನವನ್ನ ತಾಲಿಬಾನ್​​ ಉಗ್ರರು ಸಂಪೂರ್ಣವಾಗಿ ತಮ್ಮ ಹತೋಟಿಗೆ ಪಡೆದುಕೊಂಡ ನಂತರ ಆ ದೇಶದ ಜನರ ಬದುಕು ಅಕ್ಷರಶಹ ನರಕಯಾತನೆಯಾಗಿದೆ. ಆಹಾರ, ಉದ್ಯೋಗ ಸಮಸ್ಯೆ ಸೇರಿದಂತೆ ಅನೇಕ ರೀತಿಯ ತೊಂದರೆ ಉದ್ಭವವಾಗಿದೆ. ಹೀಗಾಗಿ ಅಲ್ಲಿನ ಜನರಿಗೆ ಭಾರತ ಮಾನವೀಯತೆಯಿಂದ ನೆರವು ನೀಡುತ್ತಿದೆ.

ಅಫ್ಘಾನಿಸ್ತಾನಕ್ಕೆ ಈಗಾಗಲೇ 50 ಸಾವಿರ ಮೆಟ್ರಿಕ್ ಟನ್​ ಗೋಧಿ ಸೇರಿದಂತೆ ಅಗತ್ಯ ಜೀವ ರಕ್ಷಕ ಔಷಧ ಒದಗಿಸಿರುವ ಭಾರತ ಇದೀಗ 5 ಲಕ್ಷ ಕೋವಿಡ್ ವ್ಯಾಕ್ಸಿನ್​ ರವಾನಿಸಿದೆ. ಕಾಬೂಲ್​​ನಲ್ಲಿರುವ ಇಂದಿರಾ ಗಾಂಧಿ ಆಸ್ಪತ್ರೆಗೆ ಲಸಿಕೆ ಹಸ್ತಾಂತರ ಮಾಡಲಾಗಿದ್ದು, ಮುಂದಿನ ಕೆಲ ವಾರಗಳಲ್ಲಿ ಹೆಚ್ಚುವರಿಯಾಗಿ 5 ಲಕ್ಷ ಕೋವಿಡ್ ಡೋಸ್​ ಪೂರೈಸುವುದಾಗಿ ಅಭಯ ನೀಡಿದೆ.

ಅಫ್ಘಾನಿಸ್ತಾನದಲ್ಲಿ ಅರಾಜಕತೆ ಉಂಟಾಗಿರುವ ಕಾರಣ ಭಾರತ ಆಹಾರ ಧಾನ್ಯಗಳು, ಅಗತ್ಯ ಔಷಧ ಹಾಗೂ ಕೋವಿಡ್​ ಡೋಸ್​ ನೀಡಲು ನಿರ್ಧರಿಸಿದ್ದು, ಮಾನವೀಯತೆ ಆಧಾರದ ಮೇರೆಗೆ ಈ ಸಹಾಯ ಮಾಡುತ್ತಿದೆ.

ಇದನ್ನೂ ಓದಿರಿ:ಮಹಾರಾಷ್ಟ್ರದಲ್ಲಿ ಕೊರೊನಾ ರಣಕೇಕೆ.. ನಟಿ ಮೃಣಾಲ್ ಠಾಕೂರ್​ಗೂ ವಕ್ಕರಿಸಿದ ಮಹಾಮಾರಿ

ಕಳೆದ ಡಿಸೆಂಬರ್​ ತಿಂಗಳಲ್ಲಿ ಭಾರತ ವಿಶ್ವ ಆರೋಗ್ಯ ಸಂಸ್ಥೆ ಮೂಲಕ ಅಫ್ಘಾನಿಸ್ತಾನಕ್ಕೆ 1.6 ಟನ್​ ವೈದ್ಯಕೀಯ ನೆರವು ನೀಡಿದ್ದು, ಇದೀಗ ಮತ್ತಷ್ಟು ಸಹಾಯಹಸ್ತ ಚಾಚಿದೆ. ಪಾಕಿಸ್ತಾನದ ವಾಘಾ ಗಡಿ ಮೂಲಕ ಅಫ್ಘಾನಿಸ್ತಾನಕ್ಕೆ ಅಗತ್ಯ ವಸ್ತುಗಳ ನೆರವು ನೀಡಲಾಗುತ್ತಿದೆ.

ABOUT THE AUTHOR

...view details