ನವದೆಹಲಿ:ದೇಶದಲ್ಲಿ ಕೋವಿಡ್ ವ್ಯಾಕ್ಸಿನ್ ಅಭಿವೃದ್ಧಿಯಾಗಲು ಶುರುವಾದಾಗಿನಿಂದಲೂ ಇಲ್ಲಿಯವರೆಗೆ ವಿಶ್ವದಾದ್ಯಂತ 84 ದೇಶಗಳಿಗೆ 64 ಮಿಲಿಯನ್ ಡೋಸ್ ಕೋವಿಡ್ -19 ಲಸಿಕೆ ರವಾನೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಮಾಹಿತಿ ನೀಡಿದರು.
ಕೋವಿಡ್ -19 ಲಸಿಕೆ ಉತ್ಪಾದನೆ ಕುರಿತ ಸಮಿತಿಯ ಚರ್ಚೆ ಉದ್ದೇಶಿಸಿ ಮಾತನಾಡಿದ ಡಾ.ಹರ್ಷವರ್ಧನ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಾವು ವಿಶ್ವದ ಅಗತ್ಯತೆಗಳು ಮತ್ತು ಭಾರತೀಯರ ಅಗತ್ಯಗಳ ನಡುವೆ ಉತ್ತಮ ಗುಣಮಟ್ಟದ ಸಮತೋಲನ ಪ್ರಾರಂಭಿಸಿದ್ದೇವೆ.