ನವದೆಹಲಿ:ಒಡಿಶಾದ ಬಾಲಸೋರ್ ಕರಾವಳಿ ತೀರದಲ್ಲಿ ಭಾರತವು ಯಶಸ್ವಿಯಾಗಿ ಅಗ್ನಿ ಪ್ರೈಮ್ ಮಿಸೆಲ್ ಪರೀಕ್ಷೆ ನಡೆಸಿದೆ. ಈ ಕ್ಷಿಪಣಿಗೆ ಅಗ್ನಿ-ಪಿ ಎಂದು ಹೆಸರಿಸಲಾಗಿದ್ದು, ಇಂದು ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ. ಈ ಕ್ಷಿಪಣಿಯು 1 ಸಾವಿರದಿಂದ 2 ಸಾವಿರ ಕಿ.ಮೀಟರ್ ವ್ಯಾಪ್ತಿಯಲ್ಲಿ ಗುರಿ ತಲುಪುವ ಸಾಮರ್ಥ್ಯ ಹೊಂದಿದೆ.
ಒಡಿಶಾ ಕಡಲ ತೀರದಲ್ಲಿ ಅಗ್ನಿ ಪ್ರೈಮ್ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿ - ಒಡಿಶಾ ಕಡಲ ತೀರದಲ್ಲಿ ಅಗ್ನಿ ಪ್ರೈಮ್ ಕ್ಷಿಪಣಿ
ಒಡಿಶಾದ ಬಾಲಸೋರ್ ಕರಾವಳಿ ತೀರದ ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಅಗ್ನಿ-ಪಿ ಕ್ಷಿಪಣಿ ಪರೀಕ್ಷೆ ನಡೆಸಲಾಗಿದೆ. ಇದು ಅಗ್ನಿ ಮಿಸೆಲ್ಗಳ ವರ್ಗದ ಹೊಸ ಪೀಳಿಗೆಯ ಸುಧಾರಿತ ರೂಪಾಂತರವಾಗಿದೆ.
ಅಗ್ನಿ ಪ್ರೈಮ್ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿ
ಈ ಕ್ಷಿಪಣಿಯು ಅಗ್ನಿ ಮಿಸೆಲ್ಗಳ ವರ್ಗದ ಹೊಸ ಪೀಳಿಗೆಯ ಸುಧಾರಿತ ರೂಪಾಂತರವಾಗಿದೆ. ಜೊತೆಗೆ ಇದೊಂದು ಪರಮಾಣು ಸಾಮರ್ಥ್ಯದ ಖಂಡಾಂತರ ಕ್ಷಿಪಣಿಯಾಗಿದೆ ಎಂದು ಡಿಆರ್ಡಿಒ ತಿಳಿಸಿದೆ.
ಇದನ್ನೂ ಓದಿ: ಅಗತ್ಯ ಬಿದ್ದರೆ ಭಾರತಕ್ಕೆ ಹೆಚ್ಚಿನ 'ರಫೇಲ್' ನೀಡಲು ಫ್ರಾನ್ಸ್ ಸಿದ್ಧ: ಫ್ಲಾರೆನ್ಸ್ ಪಾರ್ಲಿ
TAGGED:
Dr APJ Abdul Kalam island