ಕರ್ನಾಟಕ

karnataka

ETV Bharat / bharat

ಬ್ರಹ್ಮೋಸ್ ಕ್ಷಿಪಣಿಯ ಹೊಸ ಆವೃತ್ತಿಯ ಪರೀಕ್ಷೆ ಯಶಸ್ವಿ - ಡಿಆರ್​​ಡಿಒ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ

ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯ ಹೊಸ ಆವೃತ್ತಿಯನ್ನು ಭಾರತ ಇಂದು ಯಶಸ್ವಿಯಾಗಿ ಪರೀಕ್ಷಿಸಿದೆ.

DRDO  BrahMos supersonic cruise missile
ಬ್ರಹ್ಮೋಸ್ ಕ್ಷಿಪಣಿಯ ಹೊಸ ಆವೃತ್ತಿಯ ಪರೀಕ್ಷೆ ಯಶಸ್ವಿ

By

Published : Jan 20, 2022, 4:22 PM IST

ನವದೆಹಲಿ: ಇಂದು ಒಡಿಶಾದ ಬಾಲಸೋರ್‌ನ ಕರಾವಳಿಯಲ್ಲಿ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯ ಹೊಸ ಆವೃತ್ತಿಯನ್ನು ಭಾರತ ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ರಕ್ಷಣಾ ಮೂಲಗಳ ಪ್ರಕಾರ, ಕ್ಷಿಪಣಿಯು ಹೊಸ ತಾಂತ್ರಿಕ ಬೆಳವಣಿಗೆಗಳನ್ನು ಹೊಂದಿದ್ದು, ಇದು ಯಶಸ್ವಿಯಾಗಿದೆ. ಇದಕ್ಕೂ ಮುನ್ನ ಜನವರಿ 11 ರಂದು ಭಾರತವು ನೌಕಾಪಡೆಯ ಐಎನ್‌ಎಸ್ ವಿಶಾಖಪಟ್ಟಣಂ ಯುದ್ಧನೌಕೆಯಿಂದ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿತ್ತು.

ಇದನ್ನೂ ಓದಿ: ಭಾರತದ ಮೇಲೆ ಯಾರ ಕಣ್ಣು ಬೀಳಬಾರದೆಂದು ಬ್ರಹ್ಮೋಸ್ ತಯಾರಿಕೆ: ರಾಜನಾಥ ಸಿಂಗ್

ರಷ್ಯಾದ ಸಹಭಾಗಿತ್ವದಲ್ಲಿ ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​​ಡಿಒ) ಸಿದ್ಧಪಡಿಸಿರುವ ಬ್ರಹ್ಮೋಸ್ ಸೂಪರ್​ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಭೂಮಿ ಮಾತ್ರವಲ್ಲದೇ ಸಮುದ್ರದಿಂದಲೂ ಉಡಾಯಿಸಬಹುದಾಗಿದೆ. ರಷ್ಯಾದ P-800 ಕ್ಷಿಪಣಿ ಮಾದರಿಯಲ್ಲಿಯೇ ಬ್ರಹ್ಮೋಸ್ ಅನ್ನು ತಯಾರಿಸಲಾಗಿದೆ. ಬ್ರಹ್ಮೋಸ್ ಭಾರತೀಯ ನೌಕಾಪಡೆಯ ಯುದ್ಧನೌಕೆಗಳ ಮುಖ್ಯ ಆಯುಧ ವ್ಯವಸ್ಥೆಯಾಗಿದೆ.

For All Latest Updates

TAGGED:

ABOUT THE AUTHOR

...view details