ನವದೆಹಲಿ:ರಷ್ಯಾ ದಾಳಿಯಿಂದ ತೀವ್ರ ತೊಂದರೆಗೊಳಗಾಗಿರುವ ಯುದ್ಧಪೀಡಿತ ಉಕ್ರೇನ್ಗೆ ಇದೀಗ ಭಾರತ ಮಾನವೀಯ ದೃಷ್ಟಿಯಿಂದ ನೆರವು ನೀಡಲು ಮುಂದಾಗಿದ್ದು, ಪ್ರಮುಖ ಔಷಧಗಳು ಹಾಗೂ ಅಗತ್ಯವಸ್ತುಗಳನ್ನು ರವಾನಿಸಿದೆ. ಉಕ್ರೇನ್ನ ನೆರೆರಾಷ್ಟ್ರ ಪೋಲೆಂಡ್ ಮೂಲಕ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಭಾರತ ನಿರ್ಧರಿಸಿದೆ.
ರಷ್ಯಾ ದಾಳಿಯಿಂದ ತತ್ತರಿಸಿ ಹೋಗಿರುವ ಉಕ್ರೇನ್ ಈಗಾಗಲೇ ಪ್ರಮುಖ ದೇಶಗಳಿಂದ ಮಾನವೀಯ ನೆರವು ಕೇಳಿದ್ದು, ಭಾರತದ ಮುಂದೆ ಕೂಡ ತನ್ನ ಸಂಕಷ್ಟ ಹೇಳಿಕೊಂಡಿತ್ತು. ಈ ವೇಳೆ ಅಗತ್ಯ ನೆರವು ನೀಡುವುದಾಗಿ ಕೇಂದ್ರ ಘೋಷಣೆ ಮಾಡಿತ್ತು. ಇದೇ ವಿಷಯವಾಗಿ ನಿನ್ನೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿತ್ತು.