ನವದೆಹಲಿ :ತೀವ್ರ ಸಂಕಷ್ಟದಲ್ಲಿರುವ ಆಫ್ಘಾನಿಸ್ತಾನಕ್ಕೆ ಭಾರತದ ನೆರವು ಮುಂದುವರದಿದೆ. 2,000 ಮೆಟ್ರಿಕ್ ಟನ್ ಗೋಧಿಯನ್ನು ಅಟ್ಟಾರಿ-ವಾಘಾ ಗಡಿಯ ಮೂಲಕ ಆಫ್ಘಾನಿಸ್ತಾನಕ್ಕೆ ರವಾನಿಸಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಂಗಳವಾರ ಹೇಳಿದೆ.
ನಾಲ್ಕನೇ ಬಾರಿಗೆ ಭಾರತ ಮಾನವೀಯ ನೆರವನ್ನು ನೀಡುತ್ತಿದೆ. ಈ ಬಾರಿಯೂ ಸೇರಿದಂತೆ 8000 ಸಾವಿರ ಮೆಟ್ರಿಕ್ ಟನ್ಗಳಷ್ಟು ಗೋಧಿಯನ್ನು ಆಫ್ಘಾನಿಸ್ತಾನಕ್ಕೆ ರವಾನೆ ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವಿಟರ್ನಲ್ಲಿ ಮಾಹಿತಿ ನೀಡಿದ್ದಾರೆ.
ಭಾರತದಿಂದ 2,500 ಟನ್ ಗೋಧಿಯ ನೆರವನ್ನು ಮೊದಲ ಬಾರಿಗೆ ಫೆಬ್ರವರಿ 26ರಂದು ಪಾಕಿಸ್ತಾನದ ಮೂಲಕ ಆಫ್ಘಾನಿಸ್ತಾನದ ಜಲಾಲಾಬಾದ್‌ಗೆ ತಲುಪಿಸಲಾಗಿತ್ತು.