ಕರ್ನಾಟಕ

karnataka

ETV Bharat / bharat

ಹೊಸ ಸೋಂಕಿತರಲ್ಲಿ ಸ್ವಲ್ಪ ಏರಿಕೆ; ಈವರೆಗೆ 26 ಕೋಟಿ ಮಂದಿಗೆ ವ್ಯಾಕ್ಸಿನ್​

ಭಾರತದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. ನಿನ್ನೆಗೆ ಹೋಲಿಸಿದರೆ ಇಂದು ಹೊಸದಾಗಿ ಸೋಂಕಿಗೆ ಒಳಪಟ್ಟವರ ಪ್ರಮಾಣ ಸುಮಾರು 2 ಸಾವಿರದಷ್ಟು ಏರಿಕೆಯಾಗಿದೆ.

India sees slight rise in corona new cases
ಹೊಸ ಸೋಂಕಿತರಲ್ಲಿ ಸ್ವಲ್ಪ ಏರಿಕೆ, ಈವರೆಗೆ 26 ಕೋಟಿ ಮಂದಿಗೆ ವ್ಯಾಕ್ಸಿನ್​

By

Published : Jun 16, 2021, 12:31 PM IST

ನವದೆಹಲಿ:ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಖುಷಿಪಡುತ್ತಿರುವಾಗಲೇ ಹೊಸ ಸೋಂಕಿತರ ಸಂಖ್ಯೆಯಲ್ಲಿ ಸ್ವಲ್ಪ ಮಟ್ಟದ ಏರಿಕೆ ಕಂಡುಬಂದಿದೆ. ದೇಶದಲ್ಲಿ 62,224 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಮಂಗಳವಾರ 60,471 ಸೋಂಕಿತರು ಪತ್ತೆಯಾಗಿದ್ದು ವರದಿಯಾಗಿತ್ತು.

ಇಲ್ಲಿಯವರೆಗೆ ದೇಶದಲ್ಲಿ ಒಟ್ಟು 2,96,33,105 ಕೋವಿಡ್​ ಕೇಸ್​ಗಳು ಪತ್ತೆಯಾಗಿವೆ. ಮೃತರ ಸಂಖ್ಯೆ 3,79,573ಕ್ಕೆ ಹೆಚ್ಚಳವಾಗಿದೆ. 2.96 ಕೋಟಿ ಸೋಂಕಿತರಲ್ಲಿ 2,83,88,100 ಮಂದಿ ವೈರಸ್​ನಿಂದ ಚೇತರಿಸಿಕೊಂಡಿದ್ದು 8,65,432 ಕೇಸ್​ಗಳು ಸಕ್ರಿಯವಾಗಿವೆ.

ಚೇತರಿಕೆ ಪ್ರಮಾಣದಲ್ಲಿ ಏರಿಕೆ

ಕೋವಿಡ್​ನಿಂದ ಚೇತರಿಸಿಕೊಳ್ಳುವವರ ಪ್ರಮಾಣ ಶೇ 95.80ಕ್ಕೆ ಏರಿಕೆಯಾಗಿದೆ. ವಾರದ ಪಾಸಿಟಿವಿಟಿ ಪ್ರಮಾಣ ಶೇಕಡಾ 5ಕ್ಕಿಂತ ಕಡಿಮೆಯಿದ್ದು, ಪ್ರಸ್ತುತ ಶೇ 4.17ರಷ್ಟಿದೆ. ದೈನಂದಿನ ಪಾಸಿಟಿವಿಟ ಪ್ರಮಾಣ ಶೇ 3.22ರಷ್ಟಿದೆ. ಕಳೆದ 9 ದಿನಗಳಿಂದ ಶೇಕಡಾ 5ರಷ್ಟರಲ್ಲೇ ಪಾಸಿಟಿವಿಟಿ ಪ್ರಮಾಣ ಇದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ಇದನ್ನೂ ಓದಿ:ಡಿಜಿಪಿ ಹೆಸರಲ್ಲೇ ವಂಚನೆಗೆ ಹುನ್ನಾರ: ಇನ್ನು ಜನಸಾಮಾನ್ಯರ ಪಾಡೇನು?

26 ಕೋಟಿ ಮಂದಿಗೆ ವ್ಯಾಕ್ಸಿನ್​

ಜನವರಿ 16ರಿಂದ ಈವರೆಗೆ ದೇಶಾದ್ಯಂತ ಕೊರೊನಾ​ ಲಸಿಕೆಯ 26,19,72,014 ಡೋಸ್​ಗಳನ್ನು ಜನರಿಗೆ ನೀಡಲಾಗಿದೆ. ಕಳೆದ 24 ಗಂಟೆಯಲ್ಲಿ 28,00,458 ಮಂದಿಗೆ ವ್ಯಾಕ್ಸಿನೇಷನ್ ಮಾಡಲಾಗಿದೆ.

ABOUT THE AUTHOR

...view details