ಕರ್ನಾಟಕ

karnataka

ETV Bharat / bharat

3 ಲಕ್ಷದ ಗಡಿಯಿಂದ ಇಳಿಕೆ ಕಂಡ ಕೊರೊನಾ: ನಿಟ್ಟುಸಿರು ಬಿಟ್ಟ ಭಾರತದ ಜನ - India covid report'

ದೇಶದಲ್ಲಿ ಮಹಾಮಾರಿ ಸೋಂಕಿಗೆ ನಿನ್ನೆ 614 ಮಂದಿ ಸಾವನ್ನಪ್ಪಿದ್ದು, ಈ ಮೂಲಕ ಒಟ್ಟು ಮೃತಪಟ್ಟವರ ಸಂಖ್ಯೆ4,90,462 ಕ್ಕೆ ಏರಿಕೆಯಾಗಿದೆ.

3 ಲಕ್ಷದ ಗಡಿಯಿಂದ ಇಳಿಕೆ ಕಂಡ ಕೊರೊನಾ: ನಿಟ್ಟುಸಿರು ಬಿಟ್ಟ ಭಾರತದ ಜನ
3 ಲಕ್ಷದ ಗಡಿಯಿಂದ ಇಳಿಕೆ ಕಂಡ ಕೊರೊನಾ: ನಿಟ್ಟುಸಿರು ಬಿಟ್ಟ ಭಾರತದ ಜನ

By

Published : Jan 25, 2022, 9:30 AM IST

Updated : Jan 25, 2022, 10:37 AM IST

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 2,55,874 ಹೊಸ ಕೋವಿಡ್-19 (COVID-19) ಪ್ರಕರಣಗಳು ದೃಢಪಟ್ಟಿದ್ದು ಒಟ್ಟು ಸಕ್ರಿಯ ಸೋಂಕಿತರ ಸಂಖ್ಯೆ 22,36,842ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಮಹಾಮಾರಿ ಸೋಂಕಿಗೆ ನಿನ್ನೆ 614 ಮಂದಿ ಸಾವನ್ನಪ್ಪಿದ್ದು, ಈ ಮೂಲಕ ಒಟ್ಟು ಮೃತಪಟ್ಟವರ ಸಂಖ್ಯೆ4,90,462ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 2,67,753 ಸೋಂಕಿತರು ಕೊರೊನಾದಿಂದ ಚೇತರಿಸಿಕೊಂಡಿದ್ದು, ಈ ಮೂಲಕ ಒಟ್ಟು ಗುಣಮುಖರಾದವರ ಸಂಖ್ಯೆ 3,70,71,898 ಕ್ಕೆ ತಲುಪಿದೆ. ಪ್ರಸ್ತುತ ದೇಶದಲ್ಲಿ ಚೇತರಿಕೆ ಪ್ರಮಾಣ 93.15% ಇದೆ ಎಂದು ಸಚಿವಾಲಯ ತಿಳಿಸಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ದೇಶದಲ್ಲಿ 22,36,842ಸಕ್ರಿಯ ಪ್ರಕರಣಗಳಿದ್ದು, ಕಳೆದ ನಾಲ್ಕೈದು ದಿನಗಳಿಗೆ ಹೋಲಿಸಿದರೆ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಲಸಿಕೆ ನೀಡುವ ಕಾರ್ಯ ಸಹ ಭರದಿಂದ ಸಾಗುತ್ತಿದ್ದು, ಈವರೆಗೆ 1,62,92,09,308 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ.

ಇದನ್ನು ಓದಿ:ಸೇತುವೆ ಮೇಲಿಂದ 50 ಅಡಿ ಕೆಳಗೆ ಬಿದ್ದ ಕಾರು.. ಶಾಸಕನ ಮಗ ಸೇರಿ ಏಳು ವೈದ್ಯಕೀಯ ವಿದ್ಯಾರ್ಥಿಗಳು ದಾರುಣ ಸಾವು!

Last Updated : Jan 25, 2022, 10:37 AM IST

ABOUT THE AUTHOR

...view details