ಕರ್ನಾಟಕ

karnataka

ETV Bharat / bharat

ಕೋವಿಡ್‌ ಹೊಸ ರೂಪಾಂತರಿ XE: ದೇಶದ ಮೊದಲ ಪ್ರಕರಣ ಮುಂಬೈನಲ್ಲಿ ಪತ್ತೆ! - ಕೋವಿಡ್‌ ರೂಪಾಂತರಿ ಎಕ್ಸ್‌ಇ ಪತ್ತೆ

ಮುಂಬೈನಲ್ಲಿ ಕೋವಿಡ್‌-19 ಸಾಂಕ್ರಾಮಿಕದ ಹೊಸ ರೂಪಾಂತರಿ ಎಕ್ಸ್‌ಇ ಸೋಂಕು ಪತ್ತೆಯಾಗಿದೆ. ಇದು ದೇಶದಲ್ಲೇ ಕಂಡುಬಂದಿರುವ ಮೊದಲ ಪ್ರಕರಣವಾಗಿದೆ.

ಕೋವಿಡ್‌-19 ಸಾಂಕ್ರಾಮಿಕದ ಹೊಸ ರೂಪಾಂತರಿ ಎಕ್ಸ್‌ಇ
ಕೋವಿಡ್‌-19 ಸಾಂಕ್ರಾಮಿಕದ ಹೊಸ ರೂಪಾಂತರಿ ಎಕ್ಸ್‌ಇ

By

Published : Apr 6, 2022, 6:11 PM IST

Updated : Apr 6, 2022, 7:51 PM IST

ಮುಂಬೈ(ಮಹಾರಾಷ್ಟ್ರ): ಕೋವಿಡ್‌ ಸಾಂಕ್ರಾಮಿಕದ ಹೊಸ ರೂಪಾಂತರಿ ಎಕ್ಸ್‌ಇ(XE) ಮುಂಬೈನಲ್ಲಿ ಪತ್ತೆಯಾಗಿದೆ. ಇದು ದೇಶದಲ್ಲೇ ಕಂಡುಬಂದಿರುವ ಮೊದಲ ಪ್ರಕರಣವಾಗಿದೆ. ಈಗಾಗಲೇ ಕೋವಿಡ್‌ನ ಒಂದು, ಎರಡು 3ನೇ ಅಲೆಗಳಲ್ಲಿ ಭಾರತ ಸೇರಿದಂತೆ ಪ್ರಪಂಚ ತತ್ತರಿಸಿದ್ದು, 4ನೇ ಅಲೆ ಜೂನ್‌ನಲ್ಲಿ ಅಪ್ಪಳಿಸಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಎಕ್ಸ್‌ಇ ಸೋಂಕು ಒಮಿಕ್ರಾನ್ ರೂಪಾಂತರದ ಎರಡು ತಳಿಗಳ ವಿಭಜನೆಯಿಂದ ಉಂಟಾಗಿದೆ. BA.1 ಮತ್ತು BA.2 ತಳಿಗಳ ಮೂಲಕ ಇದು 'ಪುನಃಸಂಯೋಜಕ'(recombinant) ಆಗಿದೆ. ಇತರ ಕೋವಿಡ್‌ ರೂಪಾಂತರಗಳಿಗಿಂತ ಕನಿಷ್ಠ ಶೇ.10ರಷ್ಟು ಹೆಚ್ಚು ಹರಡುತ್ತದೆ. ಅಲ್ಲದೇ, ಒಂದು ಕಪ್ಪಾ ರೂಪಾಂತರಿ ಪ್ರಕರಣವೂ ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

376 ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್‌ ಪರೀಕ್ಷೆ ನಡೆಸಲಾಗಿದೆ. ಮುಂಬೈನ 230 ಮಾದರಿಗಳಲ್ಲಿ 228 ಮಾದರಿಗಳು ಒಮಿಕ್ರಾನ್ ರೂಪಾಂತರಿ ಪತ್ತೆಯಾಗಿದೆ. ಇದರಲ್ಲಿ ಒಂದು ರೂಪಾಂತರಿ ಎಕ್ಸ್‌ಇ ಹಾಗೂ ಮತ್ತೊಂದು ಕಪ್ಪಾ ರೂಪಾಂತರಿ ಎಂದು ತಿಳಿದಬಂದಿದೆ. ಈ ಹೊಸ ತಳಿ ಸೋಂಕಿತ ರೋಗಿಗಳ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ರಸ್ತೆ ಅಪಘಾತಗಳಲ್ಲಿ ಸಾವಿಗೀಡಾಗುವವರ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ನಂಬರ್​ ಒನ್

Last Updated : Apr 6, 2022, 7:51 PM IST

ABOUT THE AUTHOR

...view details