ನವದೆಹಲಿ: ಭಾರತದಲ್ಲಿ ಕಳೆದೆರಡು ತಿಂಗಳಿಂದ ಕೋವಿಡ್ ಕೇಸ್ಗಳು ತಗ್ಗುತ್ತಿವೆಯಾದರೂ ಮೃತರ ಸಂಖ್ಯೆಯಲ್ಲಿ ಇಳಿಕೆ ಕಂಡು ಬರದೇ ಇರುವುದು ಆತಂಕಕ್ಕೆ ಕಾರಣವಾಗಿದೆ. ನಿನ್ನೆ ಪತ್ತೆಯಾದದ್ದು 9,119 ಹೊಸ ಸೋಂಕಿತರಾದರೂ ಸಾವನ್ನಪ್ಪಿದ್ದು ಮಾತ್ರ ಬರೋಬ್ಬರಿ 396 ಮಂದಿ.
ದೇಶದಲ್ಲಿನ ಒಟ್ಟು ಕೋವಿಡ್ ಕೇಸ್ಗಳ ಸಂಖ್ಯೆ 3,45,35,763 ಹಾಗೂ ಮೃತರ ಸಂಖ್ಯೆ 4,66,584ಕ್ಕೆ ಏರಿಕೆಯಾಗಿದೆ. ಗುಣಮುಖರ ಪ್ರಮಾಣ ಶೇ.96.33ಕ್ಕೆ ಏರಿಕೆಯಾಗಿದ್ದು, 539 ದಿನಗಳ ಬಳಿಕ ಸಕ್ರಿಯ ಪ್ರಕರಣಗಳ ಸಂಖ್ಯೆ 1,09,940ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.