ಕರ್ನಾಟಕ

karnataka

ETV Bharat / bharat

India Covid Report: 287 ದಿನಗಳ ಬಳಿಕ ಭಾರತದಲ್ಲಿ ಅತಿ ಕಡಿಮೆ ಕೋವಿಡ್​ ಕೇಸ್​ ದಾಖಲು - Ministry of Health and Family Welfare

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 8,865 ಕೋವಿಡ್​ ಸೋಂಕಿತರು ಪತ್ತೆಯಾಗಿದ್ದು, 197 ಮಂದಿ ಬಲಿಯಾಗಿದ್ದಾರೆ. ಈ ಪೈಕಿ ಕೇರಳ ರಾಜ್ಯವೊಂದರಲ್ಲೇ 4,547 ಪ್ರಕರಣಗಳು ಹಾಗೂ 57 ಸಾವು ವರದಿಯಾಗಿದೆ.

India Covid Report
India Covid Report

By

Published : Nov 16, 2021, 11:36 AM IST

Updated : Nov 16, 2021, 11:50 AM IST

ನವದೆಹಲಿ:ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 8,865 ಮಂದಿ ಕೊರೊನಾ​ ಸೋಂಕಿತರು ಪತ್ತೆಯಾಗಿದ್ದು, 287 ದಿನಗಳ ಬಳಿಕ ಇಷ್ಟು ಕಡಿಮೆ ಕೇಸ್​ಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (Ministry of Health and Family Welfare) ಮಾಹಿತಿ ನೀಡಿದೆ.

ಇನ್ನು ನಿನ್ನೆ 197 ಮಂದಿ ಸೋಂಕಿಗೆ ಬಲಿಯಾಗಿದ್ದು, ಕೋವಿಡ್​ ಮೃತರ ಸಂಖ್ಯೆ 4,63,852 ಹೆಚ್ಚಳವಾಗಿದೆ. ಇಲ್ಲಿಯವರೆಗೆ ಒಟ್ಟು 3,44,56,401 ಜನರಿಗೆ ವೈರಸ್​​​ ಅಂಟಿದ್ದು, ಇವರಲ್ಲಿ ಶೇ.98.27ರಷ್ಟು ಮಂದಿ ಗುಣಮುಖರಾಗಿ (India's covid recovery rate), ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ. 525 ದಿನಗಳ ಬಳಿಕ ಆ್ಯಕ್ಟಿವ್​ ಕೇಸ್​ ಪ್ರಮಾಣ ಶೇ.0.38 ಕ್ಕೆ ಇಳಿಕೆಯಾಗಿದ್ದು, ಪ್ರಸ್ತುತ 1,30,793 ಪ್ರಕರಣಗಳು ಸಕ್ರಿಯವಾಗಿವೆ.

ಇದನ್ನೂ ಓದಿ: Coronavirus - Shaped Cucumber: ಇದು ಕೊರೊನಾ ವೈರಸ್ ಅಲ್ಲ, ಸೌತೆಕಾಯಿ..!

ನಿನ್ನೆ ಪತ್ತೆಯಾದ 8,865 ಕೋವಿಡ್​ ಸೋಂಕಿತರು ಮತ್ತು 197 ಮಂದಿ ಸಾವಿನ ಪೈಕಿ ಕೇರಳ ರಾಜ್ಯವೊಂದರಲ್ಲೇ 4,547 ಪ್ರಕರಣಗಳು ಹಾಗೂ 57 ಸಾವು ವರದಿಯಾಗಿದೆ.

112.97 ಕೋಟಿ ಡೋಸ್​ ವ್ಯಾಕ್ಸಿನೇಷನ್​ (India covid vaccination)

ದೇಶಾದ್ಯಂತ ಜನವರಿ 16ರಿಂದ ಕೊರೊನಾ ಲಸಿಕಾ ಅಭಿಯಾನ ಆರಂಭಿಸಲಾಗಿದ್ದು, ಈವರೆಗೆ 1,12,97,84,045 ಡೋಸ್​ ವ್ಯಾಕ್ಸಿನ್​ ನೀಡಲಾಗಿದೆ. ನಿನ್ನೆ ಒಂದೇ ದಿನ 59,75,469 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ.

Last Updated : Nov 16, 2021, 11:50 AM IST

ABOUT THE AUTHOR

...view details