ನವದೆಹಲಿ: 71 ದಿನಗಳ ಬಳಿಕ ಭಾರತದಲ್ಲಿ ಅತೀ ಕಡಿಮೆ ಅಂದರೆ 80,834 ಕೊರೊನಾ ಸೋಂಕಿತರು ಶನಿವಾರ ಪತ್ತೆಯಾಗಿದ್ದು, 3,303 ರೋಗಿಗಳು ಸಾವನ್ನಪ್ಪಿದ್ದಾರೆ.
ಕಳೆದ 24 ಗಂಟೆಗಳಲ್ಲಿ 1,32,062 ಮಂದಿ ಸೋಂಕಿನಿಂದ ಗುಣಮುಖರಾಗಿ ಅಸ್ಪತ್ರೆಯಿಂದ ಹೊರ ಬಂದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ದೇಶದಲ್ಲೀಗ ಒಟ್ಟು 2,94,39,989 ಸೋಂಕಿತರಿದ್ದು, ಈ ಪೈಕಿ 10,26,159 ಕೇಸ್ಗಳು ಮಾತ್ರ ಸಕ್ರಿಯವಾಗಿವೆ. 2,80,43,446 ಮಂದಿ ಇಲ್ಲಿಯವರೆಗೆ ವೈರಸ್ನಿಂದ ಚೇತರಿಸಿಕೊಂಡಿದ್ದು, ಮೃತರ ಸಂಖ್ಯೆ 3,70,384ಕ್ಕೆ ಏರಿಕೆಯಾಗಿದೆ. ಭಾರತದ ಕೋವಿಡ್ ಸಾವಿನ ಸಂಖ್ಯೆ ಇದಕ್ಕಿಂತಲೂ ಐದರಿಂದ ಏಳು ಪಟ್ಟು ಹೆಚ್ಚಿದೆ ಎಂದು 'ದಿ ಎಕನಾಮಿಸ್ಟ್' ಅಂತಾರಾಷ್ಟ್ರೀಯ ನಿಯತಕಾಲಿಕೆ ವರದಿ ಮಾಡಿದ್ದು, ಈ ಮಾಹಿತಿಯು ಸಂಪೂರ್ಣ ತಪ್ಪೆಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.