ಕರ್ನಾಟಕ

karnataka

ETV Bharat / bharat

67 ಸಾವಿರಕ್ಕಿಳಿದ ಸೋಂಕಿತರ ಸಂಖ್ಯೆ: ದೇಶದಲ್ಲಿ ಗುಣಮುಖರ ಪ್ರಮಾಣವೇ ಹೆಚ್ಚು - ಕೊರೊನಾ ಲಸಿಕೆ

ಭಾರತದಲ್ಲಿ ಕೋವಿಡ್​ನಿಂದ ಚೇತರಿಸಿಕೊಂಡವರ ಪ್ರಮಾಣ ಶೇ. 95.93ಕ್ಕೆ ಏರಿಕೆಯಾಗಿದ್ದು, 71 ದಿನಗಳ ಬಳಿಕ ಆ್ಯಕ್ಟಿವ್​ ಕೇಸ್​ಗಳ ಸಂಖ್ಯೆ 9 ಲಕ್ಷ ಗಡಿಯಿಂದ ಕೆಳಗಿಳಿದಿದೆ.

Total number of corona cases, deaths, Vaccination in India
ನಿನ್ನೆ ದೇಶದಲ್ಲಿ 67,208 ಕೋವಿಡ್​ ಕೇಸ್​, 2,330 ಸಾವು ವರದಿ

By

Published : Jun 17, 2021, 9:43 AM IST

ನವದೆಹಲಿ:ಅನೇಕ ರಾಜ್ಯಗಳಲ್ಲಿನ ಲಾಕ್​ಡೌನ್​ ಹಾಗೂ ಕಠಿಣ ನಿರ್ಬಂಧಗಳ ಫಲವಾಗಿ ಕಳೆದ 35 ದಿನಗಳಿಂದ ನಿರಂತರವಾಗಿ ಹೊಸ ಕೋವಿಡ್​ ಸೋಂಕಿತರಿಗಿಂತ ಗುಣಮುಖರ ಸಂಖ್ಯೆಯೇ ಹೆಚ್ಚು ವರದಿಯಾಗುತ್ತಿದೆ. ಭೀಕರ ಪರಿಸ್ಥಿತಿಯಿಂದ ಆರೋಗ್ಯ ಕ್ಷೇತ್ರ ಸುಧಾರಿಸಿಕೊಳ್ಳುತ್ತಿದ್ದು ಸೋಂಕಿಗೆ ಬಲಿಯಾಗುವವರ ಸಂಖ್ಯೆ ನಿಧಾನವಾಗಿ ಇಳಿಕೆಯಾಗುತ್ತಿದೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 67,208 ಕೇಸ್​ಗಳು ಪತ್ತೆಯಾಗಿದೆ. 2,330 ಮಂದಿ ಕೋವಿಡ್​ ರೋಗಿಗಳು ಮೃತಪಟ್ಟಿದ್ದಾರೆ. ಬುಧವಾರ ಒಂದೇ ದಿನದಲ್ಲಿ 1,03,570 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಭಾರತದಲ್ಲೀಗ ಸೋಂಕಿತರ ಸಂಖ್ಯೆ 2,97,00,313 ಹಾಗೂ ಮೃತರ ಸಂಖ್ಯೆ 3,81,903ಕ್ಕೆ ಏರಿಕೆಯಾಗಿದೆ. 2,84,91,670 ಮಂದಿ ಈವರೆಗೆ ವೈರಸ್​ನಿಂದ ಚೇತರಿಸಿಕೊಂಡಿದ್ದಾರೆ. ಗುಣಮುಖರ ಪ್ರಮಾಣ ಶೇ. 95.93ಕ್ಕೆ ಏರಿಕೆಯಾಗಿದೆ. 71 ದಿನಗಳ ಬಳಿಕ ಆ್ಯಕ್ಟಿವ್​ ಕೇಸ್​ಗಳ ಸಂಖ್ಯೆ 9 ಲಕ್ಷ ಗಡಿಯಿಂದ ಕೆಳಗಿಳಿದಿದ್ದು, 8,26,740 ಪ್ರಕರಣಗಳು ಸಕ್ರಿಯವಾಗಿವೆ.

26.55 ಕೋಟಿ ಡೋಸ್​ ವ್ಯಾಕ್ಸಿನೇಷನ್​

ಜನವರಿ 16ರಿಂದ ಈವರೆಗೆ ದೇಶಾದ್ಯಂತ ಕೊರೊನಾ​ ಲಸಿಕೆಯ 26,55,19,251 ಡೋಸ್​ಗಳನ್ನು ಜನರಿಗೆ ನೀಡಲಾಗಿದೆ. ಇದರಲ್ಲಿ ಸುಮಾರು 21.56 ಕೋಟಿ ಜನರು ಮೊದಲ ಡೋಸ್​ ಮಾತ್ರ ಪಡೆದಿದ್ದಾರೆ. 4.96 ಕೋಟಿಗೂ ಹೆಚ್ಚು ಜನರು ಎರಡೂ ಡೋಸ್​ಗಳನ್ನು ಹಾಕಿಸಿಕೊಂಡಿದ್ದಾರೆ.

ABOUT THE AUTHOR

...view details