ಕರ್ನಾಟಕ

karnataka

ETV Bharat / bharat

ದೇಶದಲ್ಲಿ 67 ಸಾವಿರ ಮಂದಿಗೆ ಹೊಸದಾಗಿ ಕೋವಿಡ್‌ ಸೋಂಕು ಪತ್ತೆ, 1,241 ಸಾವು - ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಭಾರತದಲ್ಲಿ ದೈನಂದಿನ ಕೋವಿಡ್‌ -19 ಪ್ರಕರಣಗಳು 1 ಲಕ್ಷಕ್ಕಿಂತ ಕೆಳಗಿಳಿದಿದ್ದು, ಕಳೆದ 24 ಗಂಟೆಗಳಲ್ಲಿ 67,084 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. ದೈನಂದಿನ ಕೋವಿಡ್​ ಪಾಸಿಟಿವಿಟಿ ದರ ಶೇ 4.44ಕ್ಕೆ ಇಳಿಕೆ ಕಂಡಿದೆ.

ಕೋವಿಡ್​
ಕೋವಿಡ್​

By

Published : Feb 10, 2022, 9:52 AM IST

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡುಬರುತ್ತಿದೆ. ಕಳೆದ 24 ಗಂಟೆಗಳಲ್ಲಿ 67,084 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇದೇ ಅವಧಿಯಲ್ಲಿ 1,241 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಕಳೆದೊಂದು ದಿನದಲ್ಲಿ 1,67,882 ಮಂದಿ ಕೋವಿಡ್​​ನಿಂದ ಚೇತರಿಕೆ ಕಂಡಿದ್ದಾರೆ. ಸದ್ಯಕ್ಕೆ ದೇಶದಲ್ಲಿ 7,90,789 ಸಕ್ರಿಯ ಸೋಂಕು ಪ್ರಕರಣಗಳಿವೆ. ದೈನಂದಿನ ಕೋವಿಡ್​ ಪಾಸಿಟಿವಿಟಿ ರೇಟ್ ಶೇ 4.44ಕ್ಕೆ ಇಳಿಕೆಯಾಗಿದೆ.

ಇದನ್ನೂ ಓದಿ:ಬೆಂಗಳೂರು ಸಂಚಾರ ದಟ್ಟಣೆ ಶೇ 32ರಷ್ಟು ಇಳಿಮುಖ: ಎಲೆಕ್ಟ್ರಿಕ್ ವಾಹನ ಖರೀದಿ ಹೆಚ್ಚಳ

ದೇಶದಲ್ಲಿ ಸಾವಿನ ಪ್ರಮಾಣ ಮಾತ್ರ ಇಳಿಕೆ ಕಾಣುತ್ತಿಲ್ಲ. ನಿನ್ನೆ 1,241 ಮಂದಿ ಬಲಿಯಾಗಿದ್ದು, ಒಟ್ಟು ಸಾವನ್ನಪ್ಪಿರುವವರ ಸಂಖ್ಯೆ 5,06,520 ತಲುಪಿದೆ.

ವ್ಯಾಕ್ಸಿನೇಷನ್​ ವಿವರ: ಈವರೆಗೆ ದೇಶದಲ್ಲಿ ಸುಮಾರು 1,71,28,19,947 ಕೋಟಿ ಡೋಸ್​ ವ್ಯಾಕ್ಸಿನ್​ ನೀಡಲಾಗಿದೆ.

ABOUT THE AUTHOR

...view details