ಕರ್ನಾಟಕ

karnataka

ETV Bharat / bharat

2 ಸಾವಿರ ಗಡಿಯಿಂದ ಕೆಳಗಿಳಿದ ದೇಶದ ಕೋವಿಡ್​ ಮೃತರ ಸಂಖ್ಯೆ: 24 ಗಂಟೆಯಲ್ಲಿ 1,587 ಮಂದಿ ಸಾವು - Covid vaccine

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 62,480 ಕೋವಿಡ್​ ಸೋಂಕಿತರು ಪತ್ತೆಯಾಗಿದ್ದು, 1,587 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

India Covid report
ನಿನ್ನೆ 1,587 ಮಂದಿ ಸಾವು

By

Published : Jun 18, 2021, 9:56 AM IST

ನವದೆಹಲಿ: ಕೋವಿಡ್​ ಎರಡನೇ ಅಲೆ ದೇಶದಲ್ಲಿ ಉಲ್ಬಣಿಸಿ ಮೇ ತಿಂಗಳ ಆರಂಭದಲ್ಲಿ ದಿನವೊಂದಲ್ಲಿ ನಾಲ್ಕು ಸಾವಿರ ಜನರು ವೈರಸ್​ಗೆ ಬಲಿಯಾಗುತ್ತಿದ್ದರು. ನಿಧಾನವಾಗಿ ಸಾವಿನ ಸಂಖ್ಯೆ ತಗ್ಗುತ್ತಾ ಬಂದಿದ್ದು, ನಿನ್ನೆ ಮೃತರ ಸಂಖ್ಯೆ ಎರಡು ಸಾವಿರ ಗಡಿಯಿಂದ ಕೆಳಗಿಳಿದಿದೆ.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 62,480 ಸೋಂಕಿತರು ಪತ್ತೆಯಾಗಿದ್ದು, 1,587 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 2,97,62,793 ಹಾಗೂ ಮೃತರ ಸಂಖ್ಯೆ 3,83,490ಕ್ಕೆ ಏರಿಕೆಯಾಗಿದೆ.

ಗುಣಮುಖರ ಪ್ರಮಾಣ ಶೇ. 96.03ಕ್ಕೆ ಹೆಚ್ಚಳ

ಇತ್ತ ಗುಣಮುಖರ ಸಂಖ್ಯೆ ಹೆಚ್ಚುತ್ತಿದ್ದು, ಗುರುವಾರ ಒಂದೇ ದಿನದಲ್ಲಿ 88,977 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಹೀಗಾಗಿ ಭಾರತದ ಕೋವಿಡ್​ ಗುಣಮುಖರ ಪ್ರಮಾಣ ಶೇ. 96.03ಕ್ಕೆ ಹೆಚ್ಚಳವಾಗಿದೆ. ಸಕ್ರಿಯ ಪ್ರಕರಣಗಳು ಸಹ 73 ದಿನಗಳ ಬಳಿಕ 8 ಲಕ್ಷ ಗಡಿಯಿಂದ ಕೆಳಗಿಳಿದಿದ್ದು, ದೇಶದಲ್ಲೀಗ 7,98,656 ಕೇಸ್​ಗಳು ಮಾತ್ರ ಆ್ಯಕ್ಟೀವ್​ ಆಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

26.89 ಕೋಟಿ ಡೋಸ್​ ವ್ಯಾಕ್ಸಿನೇಷನ್​

ದೇಶಾದ್ಯಂತ ಈವರೆಗೆ ಕೊರೊನಾ​ ಲಸಿಕೆಯ 26,89,60,399 ಡೋಸ್​ಗಳನ್ನು ಜನರಿಗೆ ನೀಡಲಾಗಿದೆ. ಇದರಲ್ಲಿ ಸುಮಾರು 21.86 ಕೋಟಿ ಜನರು ಮೊದಲ ಡೋಸ್​ ಮಾತ್ರ ಪಡೆದಿದ್ದಾರೆ. 5 ಕೋಟಿಗೂ ಹೆಚ್ಚು ಜನರು ಎರಡೂ ಡೋಸ್​ಗಳನ್ನು ಹಾಕಿಸಿಕೊಂಡಿದ್ದಾರೆ.

ABOUT THE AUTHOR

...view details