ಕರ್ನಾಟಕ

karnataka

ETV Bharat / bharat

ದೇಶದ ಕೋವಿಡ್​ ಗುಣಮುಖರ ಪ್ರಮಾಣ ಶೇ.96.97ಕ್ಕೆ ಏರಿಕೆ.. ನಿನ್ನೆ ಸಾವಿರ ಮಂದಿ ಬಲಿ - Covid vaccine

ಬುಧವಾರ ದೇಶದಲ್ಲಿ 48,786 ಕೋವಿಡ್​ ಸೋಂಕಿತರು ಪತ್ತೆಯಾಗಿದ್ದು, 1,005 ಮಂದಿ ಮೃತಪಟ್ಟಿದ್ದಾರೆ.

India reports 48,786 new COVID19 cases & 1,005 deaths in the last 24 hours
ಭಾರತದ ಕೋವಿಡ್ ವರದಿ

By

Published : Jul 1, 2021, 10:07 AM IST

ನವದೆಹಲಿ: ಕಳೆದ 49 ದಿನಗಳಿಂದ ದೇಶದಲ್ಲಿ ಪತ್ತೆಯಾಗುತ್ತಿರುವ ಹೊಸ ಕೊರೊನಾ ಸೋಂಕಿತರಿಗಿಂತ ಗುಣಮುಖರ ಸಂಖ್ಯೆಯೇ ಹೆಚ್ಚಿದೆ. ನಿನ್ನೆ 48,786 ಕೇಸ್​ಗಳು ದಾಖಲಾಗಿದ್ದರೆ 61,588 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಇಲ್ಲಿಯವರೆಗೆ ಒಟ್ಟು 2,94,88,918 ಮಂದಿ ವೈರಸ್​ನಿಂದ ಚೇತರಿಸಿಕೊಂಡಿದ್ದು, ಗುಣಮುಖರ ಪ್ರಮಾಣ ಶೇ.96.97ಕ್ಕೆ ಹೆಚ್ಚಳವಾಗಿದೆ.

ಇತ್ತ ನಿಧಾನವಾಗಿ ಸಾವಿನ ಸಂಖ್ಯೆಯೂ ತಗ್ಗುತ್ತಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 1,005 ಜನರು ಪ್ರಾಣ ಬಿಟ್ಟಿದ್ದಾರೆ. ದೇಶದಲ್ಲಿ ಒಟ್ಟು 3,04,11,634 ಮಂದಿಗೆ ಸೋಂಕು ತಗುಲಿದಂತಾಗಿದ್ದು, ಮೃತರ ಸಂಖ್ಯೆ 3,99,459 ಕ್ಕೆ ಏರಿಕೆಯಾಗಿದೆ. ಪ್ರಸ್ತುತ 5,23,257 ಪ್ರಕರಣಗಳು ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

33.57 ಕೋಟಿ ಡೋಸ್​ ವ್ಯಾಕ್ಸಿನೇಷನ್​

ಕೋವಿಡ್​ ವ್ಯಾಕ್ಸಿನೇಷನ್​​ ಅಭಿಯಾನದಡಿ ದೇಶಾದ್ಯಂತ ಈವರೆಗೆ ಲಸಿಕೆಯ 33,57,16,019 ಕೋಟಿಗೂ ಅಧಿಕ ಡೋಸ್​ಗಳನ್ನು ನೀಡಲಾಗಿದೆ. ಈ ಪೈಕಿ 27.59 ಕೋಟಿಗೂ ಅಧಿಕ ಮಂದಿ ಮೊದಲ ಡೋಸ್​ ಹಾಗೂ 5.95 ಕೋಟಿಗೂ ಹೆಚ್ಚು ಜನರು ಎರಡೂ ಡೋಸ್​ಗಳನ್ನು ಪಡೆದಿದ್ದಾರೆ.

ABOUT THE AUTHOR

...view details