ಕರ್ನಾಟಕ

karnataka

ETV Bharat / bharat

ದೇಶದಲ್ಲಿ 6 ಲಕ್ಷ ಗಡಿಯಿಂದ ಕೆಳಗಿಳಿದ ಕೋವಿಡ್​ ಸಕ್ರಿಯ ಕೇಸ್​.. ನಿನ್ನೆ 1,183 ಜನರು ಬಲಿ - ಕೊರೊನಾ ಲಸಿಕೆ

ನಿನ್ನೆ ದೇಶದಲ್ಲಿ 48,698 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 1,183 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 3,01,83,143 ಹಾಗೂ ಮೃತರ ಸಂಖ್ಯೆ 3,94,493ಕ್ಕೆ ಹೆಚ್ಚಳವಾಗಿದೆ.

India Covid report
ದೇಶದಲ್ಲಿ 6 ಲಕ್ಷ ಗಡಿಯಿಂದ ಕೆಳಗಿಳಿದ ಕೋವಿಡ್​ ಸಕ್ರಿಯ ಕೇಸ್​

By

Published : Jun 26, 2021, 10:22 AM IST

ನವದೆಹಲಿ: ಭಾರತದಲ್ಲಿ ಹೊಸ ಸೋಂಕಿತರ ಸಂಖ್ಯೆ ತಗ್ಗುತ್ತಿದ್ದು, ಚೇತರಿಕೆ ಪ್ರಮಾಣ ಶೇ.96.72ಕ್ಕೆ ಏರಿಕೆಯಾಗಿದೆ. ಕೋವಿಡ್​ ಸಕ್ರಿಯ ಪ್ರಕರಣಗಳ ಸಂಖ್ಯೆ 6 ಲಕ್ಷ ಗಡಿಯಿಂದ ಕೆಳಗಿಳಿದಿದ್ದು, ಇದೀಗ 5,95,565 ಕೇಸ್​ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಶುಕ್ರವಾರ ದೇಶದಲ್ಲಿ 48,698 ಸೋಂಕಿತರು ಪತ್ತೆಯಾಗಿದ್ದು, 1,183 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 3,01,83,143 ಹಾಗೂ ಮೃತರ ಸಂಖ್ಯೆ 3,94,493ಕ್ಕೆ ಹೆಚ್ಚಳವಾಗಿದೆ. ನಿನ್ನೆ ಒಂದೇ ದಿನ 64,818 ಮಂದಿ ಗುಣಮುಖರಾಗಿದ್ದು, ಇಲ್ಲಿಯವರೆಗೆ 2,91,93,085 ಜನರು ವೈರಸ್​ನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

31 ಕೋಟಿ ಡೋಸ್​ ವ್ಯಾಕ್ಸಿನೇಷನ್​

ದೇಶಾದ್ಯಂತ ಈವರೆಗೆ ಕೊರೊನಾ​ ಲಸಿಕೆಯ 31 ಕೋಟಿಗೂ ಹೆಚ್ಚು ಡೋಸ್​ಗಳನ್ನು ಜನರಿಗೆ ನೀಡಲಾಗಿದೆ. ಇದರಲ್ಲಿ ಸುಮಾರು 25.92 ಕೋಟಿ ಜನರು ಮೊದಲ ಡೋಸ್​ ಮಾತ್ರ ಪಡೆದಿದ್ದಾರೆ. 5.51 ಕೋಟಿಗೂ ಹೆಚ್ಚು ಜನರು ಎರಡೂ ಡೋಸ್​ಗಳನ್ನು ಹಾಕಿಸಿಕೊಂಡಿದ್ದಾರೆ.

ABOUT THE AUTHOR

...view details