ಕರ್ನಾಟಕ

karnataka

ETV Bharat / bharat

ದೇಶದಲ್ಲಿ ಇಳಿಮುಖವಾದ ಕೊರೊನಾ.. 24 ಗಂಟೆಗಳಲ್ಲಿ 59 ಸಾವಿರಕ್ಕೂ ಅಧಿಕ ಮಂದಿ ಗುಣಮುಖ - ಕೋವಿಡ್ ವರದಿ

ಪ್ರಸ್ತುತ 5,09,637 ಪ್ರಕರಣ ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ​ಕೋವಿಡ್​ ವ್ಯಾಕ್ಸಿನೇಷನ್​​ ಅಭಿಯಾನದಡಿ ದೇಶಾದ್ಯಂತ ಈವರೆಗೆ ಲಸಿಕೆಯ 34,00,76,232 ಕೋಟಿಗೂ ಅಧಿಕ ಡೋಸ್​ಗಳನ್ನು ನೀಡಲಾಗಿದೆ..

ದೇಶದಲ್ಲಿ ಇಳಿಮುಖವಾದ ಕೊರೊನಾ
ದೇಶದಲ್ಲಿ ಇಳಿಮುಖವಾದ ಕೊರೊನಾ

By

Published : Jul 2, 2021, 10:25 AM IST

Updated : Jul 2, 2021, 10:46 AM IST

ನವದೆಹಲಿ :ಕಳೆದ 50 ದಿನಗಳಿಂದ ದೇಶದಲ್ಲಿ ಪತ್ತೆಯಾಗುತ್ತಿರುವ ಹೊಸ ಕೊರೊನಾ ಸೋಂಕಿತರಿಗಿಂತ ಗುಣಮುಖರ ಸಂಖ್ಯೆಯೇ ಹೆಚ್ಚಿದೆ. ನಿನ್ನೆ 46,617 ಕೇಸ್​ಗಳು ದಾಖಲಾಗಿದ್ದರೆ, 59,384 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಈವರೆಗೆ ಒಟ್ಟು 2,95,48,302 ಮಂದಿ ವೈರಸ್​ನಿಂದ ಚೇತರಿಸಿಕೊಂಡಿದ್ದಾರೆ.

ಇತ್ತ ನಿಧಾನವಾಗಿ ಸಾವಿನ ಸಂಖ್ಯೆಯೂ ತಗ್ಗುತ್ತಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 853 ಜನರು ವೈರಸ್​ಗೆ ಬಲಿಯಾಗಿದ್ದಾರೆ. ದೇಶದಲ್ಲಿ ಒಟ್ಟು 3,04,58,251 ಮಂದಿಗೆ ಸೋಂಕು ತಗುಲಿದಂತಾಗಿದ್ದು, ಮೃತರ ಸಂಖ್ಯೆ 4,00,312ಕ್ಕೆ ಏರಿಕೆಯಾಗಿದೆ.

ಪ್ರಸ್ತುತ 5,09,637 ಪ್ರಕರಣ ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ​ಕೋವಿಡ್​ ವ್ಯಾಕ್ಸಿನೇಷನ್​​ ಅಭಿಯಾನದಡಿ ದೇಶಾದ್ಯಂತ ಈವರೆಗೆ ಲಸಿಕೆಯ 34,00,76,232 ಕೋಟಿಗೂ ಅಧಿಕ ಡೋಸ್​ಗಳನ್ನು ನೀಡಲಾಗಿದೆ.

Last Updated : Jul 2, 2021, 10:46 AM IST

ABOUT THE AUTHOR

...view details