ಕರ್ನಾಟಕ

karnataka

ETV Bharat / bharat

ಭಾರತದಲ್ಲಿ ಕೋವಿಡ್​ ತಾಂಡವ.. ಒಂದೇ ದಿನ 4 ಲಕ್ಷ ಕೇಸ್​ ಪತ್ತೆ, 3,523 ಮಂದಿ ಸೋಂಕಿಗೆ ಬಲಿ - ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ

India reports 4,01,993 new COVID19 cases, 3523 deaths in the last 24 hours
ಭಾರತದಲ್ಲಿ ಒಂದೇ ದಿನ 4 ಲಕ್ಷ ಸೋಂಕಿತರು ಪತ್ತೆ

By

Published : May 1, 2021, 9:43 AM IST

Updated : May 1, 2021, 10:17 AM IST

09:39 May 01

ಭಾರತದಲ್ಲಿ ಕೋವಿಡ್​ ತಾಂಡವ ಮುಂದುವರಿದಿದೆ. ದಿನವೊಂದರಲ್ಲಿ ಅತೀ ಹೆಚ್ಚು ಕೋವಿಡ್​ ಪ್ರಕರಣಗಳು ವರದಿಯಾಗುತ್ತಿದ್ದು, ಶುಕ್ರವಾರ ಪತ್ತೆಯಾದ ಹೊಸ ಸೋಂಕಿತರ ಸಂಖ್ಯೆ 4 ಲಕ್ಷ ಗಡಿ ದಾಟಿದೆ.

ನವದೆಹಲಿ:ಲಸಿಕೆ, ಹಾಸಿಗೆ, ಆಮ್ಲಜನಕ ಕೊರತೆಯೊಂದಿಗೆ 'ತುರ್ತು ಆರೋಗ್ಯ ಪರಿಸ್ಥಿತಿ' ಎದುರಿಸುತ್ತಿರುವ ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಮತ್ತೆ ಹೊಸದಾಗಿ ದೇಶದಲ್ಲಿ 4 ಲಕ್ಷಕ್ಕಿಂತ ಹೆಚ್ಚು (4,01,993) ಕೋವಿಡ್​ ಕೇಸ್​ಗಳು ಪತ್ತೆಯಾಗಿದ್ದು, 3,523 ಮಂದಿ ಒಂದೇ ದಿನದಲ್ಲಿ ಮೃತಪಟ್ಟಿದ್ದಾರೆ.  

ದಿನೇ ದಿನೇ ದೇಶಧಾದ್ಯಂತ ವಿಶ್ವದಲ್ಲೇ ಅತೀ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಪ್ರಪಂಚದ ಯಾವ ಕೋವಿಡ್​ ಪೀಡಿತ ದೇಶಗಳಲ್ಲಿಯೂ ಒಂದೇ ದಿನದಲ್ಲಿ 3-4 ಲಕ್ಷ ಕೇಸ್​ಗಳು ಪತ್ತೆಯಾಗಿರಲಿಲ್ಲ. ಭಾರತದಲ್ಲೀಗ ಸೋಂಕಿತರ ಸಂಖ್ಯೆ 1,91,64,969 ಹಾಗೂ ಸಾವಿನ ಸಂಖ್ಯೆ 2,11,853ಕ್ಕೆ ಏರಿಯಾಗಿದೆ.  

ಇದನ್ನೂ ಓದಿ: ಲಸಿಕೆ ಅಭಾವದ ನಡುವೆಯೂ ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್​ ವ್ಯಾಕ್ಸಿನೇಷನ್​

ಸಕ್ರಿಯ ಪ್ರಕರಣಗಳ ಸಂಖ್ಯೆ ದಿಢೀರನೇ 32,68,710ಕ್ಕೆ ಹೆಚ್ಚಳವಾಗಿದ್ದು, ಈವರೆಗೆ ಒಟ್ಟು 1,56,84,406 ಮಂದಿ ಗುಣಮುಖರಾಗಿದ್ದಾರೆ. ಶುಕ್ರವಾರ ಒಂದೇ ದಿನ ಮೂರು ಲಕ್ಷ ಸನಿಹ ಸೋಂಕಿತರು (2,99,988) ಡಿಸ್ಚಾರ್ಜ್ ಆಗಿದ್ದಾರೆಂದು ​​ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

15.49 ಕೋಟಿ ಮಂದಿಗೆ ಕೊರೊನಾ ಲಸಿಕೆ  

ಜನವರಿ 16ರಿಂದ ಈವರೆಗೆ ಒಟ್ಟು 15,49,89,635 ಮಂದಿಗೆ ಕೋವಿಡ್​ ವ್ಯಾಕ್ಸಿನ್​ ನೀಡಲಾಗಿದೆ. ಮೇ1 (ಇಂದಿನಿಂದ) 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದ್ದು, ಅರ್ಹರು ಕೋವಿನ್ ಪ್ಲಾಟ್‌ಫಾರ್ಮ್‌ನಲ್ಲಿ ಅಥವಾ ಆರೋಗ್ಯ ಸೇತು ಆ್ಯಪ್ ಮೂಲಕ ಅರ್ಹರು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. 3ನೇ ಹಂತದ ಈ ಲಸಿಕಾ ಅಭಿಯಾನಕ್ಕೆ ಈಗಾಗಲೇ 2.45 ಕೋಟಿಗೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.  

Last Updated : May 1, 2021, 10:17 AM IST

ABOUT THE AUTHOR

...view details