ನವದೆಹಲಿ:ದೇಶದಲ್ಲಿ ಕೊರೊನಾ ಭೀತಿ ಹೆಚ್ಚಾಗಿದ್ದು, ಕಳೆದ 24 ಗಂಟೆಗಳಲ್ಲಿ ಹೊಸದಾಗಿ 39,742 ಕೇಸ್ಗಳು ಪತ್ತೆಯಾಗಿವೆ. ನಿನ್ನೆ ಒಂದೇ ದಿನ 535 ಮಂದಿ ಸೋಂಕಿಗೆ ಬಲಿಯಾಗಿದ್ದು, ಈ ಮೂಲಕ ಮೃತಪಟ್ಟವರ ಸಂಖ್ಯೆ 4,20,551 ಕ್ಕೆ ಏರಿದೆ.
ದೇಶದಲ್ಲಿ ಕೊರೊನಾ ಕರಿಛಾಯೆ: ಕಳೆದ 24 ಗಂಟೆಗಳಲ್ಲಿ 39,742 ಕೇಸ್ ಪತ್ತೆ - India covid 19
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 39,742 ಕೇಸ್ಗಳು ಪತ್ತೆಯಾಗಿದ್ದು, 39,972 ಮಂದಿ ಗುಣಮುಖರಾಗಿದ್ದಾರೆ.
![ದೇಶದಲ್ಲಿ ಕೊರೊನಾ ಕರಿಛಾಯೆ: ಕಳೆದ 24 ಗಂಟೆಗಳಲ್ಲಿ 39,742 ಕೇಸ್ ಪತ್ತೆ COVID](https://etvbharatimages.akamaized.net/etvbharat/prod-images/768-512-12565690-thumbnail-3x2-mng.jpg)
ದೇಶದಲ್ಲಿ ಕೊರೊನಾ
ಸದ್ಯ 4,08,212 ಕೊರೊನಾ ಸಕ್ರಿಯ ಪ್ರಕರಣಗಳಿವೆ. ಇನ್ನು ಕಳೆದ 24 ಗಂಟೆಯಲ್ಲಿ 39,972 ಮಂದಿ ಗುಣಮುಖರಾಗಿದ್ದು, ಇಲ್ಲಿಯವರೆಗೆ 3,05,43,138 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಈವರೆಗೆ 43,31,50,864 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ICMR) ತಿಳಿಸಿದೆ.