ಕರ್ನಾಟಕ

karnataka

ETV Bharat / bharat

ಕಳೆದ 24 ಗಂಟೆಗಳಲ್ಲಿ 3 ಲಕ್ಷಕ್ಕೂ ಅಧಿಕ ಜನರಿಗೆ ಕೋವಿಡ್​ ದೃಢ: 3,780 ಮಂದಿ ಸಾವು - ಭಾರತದಲ್ಲಿ ಕೊರೊನಾ ಲಸಿಕಾ ಅಭಿಯಾನ

ಕಳೆದ 24 ಗಂಟೆಯಲ್ಲಿ ದಾಖಲಾದ ಪ್ರಕರಣಗಳೊಂದಿಗೆ ದೇಶದಲ್ಲಿ ಈವರೆಗಿನ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 2,06,65,148ಕ್ಕೆ ಏರಿದೆ.

India reports 3,82,315 new  COVID19 cases
ಕಳೆದ 24 ಗಂಟೆಗಳಲ್ಲಿ 3 ಲಕ್ಷಕ್ಕೂ ಅಧಿಕ ಜನರಿಗೆ ಕೋವಿಡ್​ ದೃಢ

By

Published : May 5, 2021, 10:46 AM IST

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3,82,315 ಹೊಸ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. 3,780 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. 3,38,439 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಈವರೆಗಿನ ಅಂಕಿ-ಅಂಶ:

ದೇಶದಲ್ಲಿ ಈವರೆಗೆ ಒಟ್ಟು 2,06,65,148 ಕೊರೊನಾ ಪ್ರಕರಣಗಳು ದಾಖಲಾಗಿವೆ. 1,69,51,731 ಸೋಂಕಿತರು ಗುಣಮುಖರಾಗಿದ್ದಾರೆ. ಸುಮಾರು 2,26,188 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಪ್ರಸ್ತುತ ದೇಶದಲ್ಲಿ 34,87,229 ಸಕ್ರಿಯ ಕೋವಿಡ್​ ಪ್ರಕರಣಗಳಿವೆ.

ಇದನ್ನೂ ಓದಿ:ಆಕ್ಸಿಜನ್ ಸಿಗದೆ ರೋಗಿಗಳು ಸಾಯುವುದು 'ನರಮೇಧ'ಕ್ಕಿಂತ ಕಡಿಮೆಯೇನಲ್ಲ: ಅಲಹಾಬಾದ್ ಹೈಕೋರ್ಟ್‌

ಕೋವಿಡ್ ಪರೀಕ್ಷೆ:

ಮೇ 4ರವರೆಗೆ 29,48,52,078 ಮಂದಿಗೆ ಕೊರೊನಾ ಟೆಸ್ಟ್​ ಮಾಡಲಾಗಿದೆ. ನಿನ್ನೆ ಒಂದೇ ದಿನ 15,41,299 ಜನರ ಸ್ಯಾಂಪಲ್​​​ಗಳನ್ನು ಪರೀಕ್ಷೆ ಮಾಡಲಾಗಿದೆ ಎಂದು ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಮೆಡಿಕಲ್ ರಿಸರ್ಚ್​ ತಿಳಿಸಿದೆ.

ಲಸಿಕೆ ವಿತರಣೆ:

ದೇಶಾದ್ಯಂತ ಇಲ್ಲಿಯವರೆಗೆ 16,04,94,188 ಜನರಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ.

ABOUT THE AUTHOR

...view details