ನವದೆಹಲಿ:ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಇಳಿಮುಖವಾಗಿದೆ. ಕಳೆದ 24 ಗಂಟೆಗಳಲ್ಲಿ ಹೊಸದಾಗಿ 38,164 ಕೇಸ್ಗಳು ಪತ್ತೆಯಾಗಿವೆ. ಇನ್ನು 38,660 ಮಂದಿ ಒಂದೇ ದಿನದಲ್ಲಿ ಗುಣಮುಖರಾಗಿದ್ದು, 499 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಮೃತಪಟ್ಟವರ ಸಂಖ್ಯೆ 4,14,108 ಕ್ಕೆ ಏರಿದೆ.
ದೇಶದಲ್ಲಿ ಕೊರೊನಾ ಇಳಿಕೆ: ಕಳೆದ 24 ಗಂಟೆಯಲ್ಲಿ 38,164 ಕೇಸ್ ಪತ್ತೆ - Corona Today's Case
ದೇಶದಲ್ಲಿ ಕಳೆದ 24 ಗಂಟೆಯಲ್ಲಿ 38,164 ಕೊರೊನಾ ಪ್ರಕರಣಗಳು ದಾಖಲಾಗಿವೆ. 38,660 ಮಂದಿ ಒಂದೇ ದಿನದಲ್ಲಿ ಗುಣಮುಖರಾಗಿದ್ದು, 499 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ದೇಶದಲ್ಲಿ ಕೊರೊನಾ ಇಳಿಕೆ
ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 3,11,44,229ಕ್ಕೆ ಏರಿಕೆಯಾಗಿದ್ದು, ಇಲ್ಲಿವರೆಗೆ 3,03,08,456 ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ 4,21,665 ಸಕ್ರಿಯ ಪ್ರಕರಣಗಳಿವೆ.
ಕಳೆದ 24 ಗಂಟೆಯಲ್ಲಿ 14,63,593 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ಜುಲೈ 18ರವರೆಗೆ 44,54,22,256 ಜನರಿಗೆ ತಪಾಸಣೆ ಮಾಡಲಾಗಿದೆ. ಈವರೆಗೆ 40,64,81,493 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ICMR) ತಿಳಿಸಿದೆ.