ನವದೆಹಲಿ: ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಲಖನೌನಂತಹ ದೇಶದ ದೊಡ್ಡ ದೊಡ್ಡ ನಗರಗಳಲ್ಲಿ ಉಲ್ಬಣಗೊಂಡಿದ್ದ ಕೊರೊನಾ ಎರಡನೇ ಅಲೆಯ ಪ್ರಭಾವ ಇದೀಗ ಪ್ರತಿ ಸಣ್ಣ ಪಟ್ಟಣಗಳು, ಹಳ್ಳಿಗಳ ಮೇಲೂ ಬೀರಿದೆ. ಆರಂಭದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅನೇಕ ಸೋಂಕಿತರು ಮೃತಪಡುತ್ತಿದ್ದರು. ಆದರೀಗ ಲಕ್ಷ ಲಕ್ಷ ಕೇಸ್ಗಳು ಪ್ರತಿನಿತ್ಯ ಪತ್ತೆಯಾಗುತ್ತಿರುವುದರಿಂದ ಆಸ್ಪತ್ರೆಗಳಲ್ಲಿ ಹಾಸಿಗೆ, ಆಕ್ಸಿಜನ್ ಸಿಗದೇ ತಮ್ಮ ಕುಟುಂಬಸ್ಥರು, ಪ್ರೀತಿಪಾತ್ರರ ಮುಂದೆಯೇ ಅಸುನೀಗುತ್ತಿದ್ದಾರೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,79,257 ಹೊಸ ಕೋವಿಡ್ ಕೇಸ್ಗಳು ವರದಿಯಾಗಿವೆ. 3,645 ಮಂದಿ ಮಾರಕ ಸೋಂಕಿಗೆ ಬಲಿಯಾಗಿದ್ದಾರೆ. ಭಾರತದಲ್ಲೀಗ ಸೋಂಕಿತರ ಸಂಖ್ಯೆ 1,83,76,524ಕ್ಕೆ ಏರಿಕೆಯಾಗಿದ್ದರೆ, ಮೃತರ ಸಂಖ್ಯೆ ಈಗಾಗಲೇ ಎರಡು ಲಕ್ಷ (2,04,832) ಗಡಿ ದಾಟಿದೆ.
ಆ್ಯಕ್ಟಿವ್ ಕೇಸ್ಗಳ ಸಂಖ್ಯೆ 30 ಲಕ್ಷಕ್ಕೆ ಹೆಚ್ಚಳ