ಕರ್ನಾಟಕ

karnataka

ETV Bharat / bharat

ದೇಶದಲ್ಲಿ ನಿಲ್ಲದ ಕೋವಿಡ್ ತಲ್ಲಣ.. ಹೊಸದಾಗಿ 34,973 ಜನರಿಗೆ ತಗುಲಿರುವ ವೈರಸ್ - ಲಸಿಕೆ

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 37,681 ಮಂದಿ ಕೋವಿಡ್​ನಿಂದ ಚೇತರಿಸಿಕೊಂಡಿದ್ದು, ಈವರೆಗೆ 3,23,42,299 ಜನರು ಗುಣಮುಖರಾಗಿದ್ದಾರೆ.

ಕೋವಿಡ್

By

Published : Sep 10, 2021, 10:26 AM IST

ನವದೆಹಲಿ: ದೇಶದಲ್ಲಿ ಹೊಸದಾಗಿ 34,973 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 3,31,74,954 ಕ್ಕೇರಿದೆ. ಕಳೆದ 24 ಗಂಟೆಗಳಲ್ಲಿ 37,681 ಮಂದಿ ವೈರಸ್​ನಿಂದ ಚೇತರಿಸಿಕೊಂಡಿದ್ದು, ಈವರೆಗೆ 3,23,42,299 ಜನರು ಗುಣಮುಖರಾಗಿದ್ದಾರೆ.

ನಿನ್ನೆ ವೈರಸ್​ಗೆ 260 ಜನರು ಬಲಿಯಾಗಿದ್ದು, ಈವರೆಗೆ 4,42,009 ಜನರು ಮೃತಪಟ್ಟಿದ್ದಾರೆ. ಸದ್ಯ 3,90,646 ಸಕ್ರಿಯ ಕೇಸ್​ಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಕೋವಿಡ್ ಮಾರ್ಗಸೂಚಿ ಅನುಸರಿಸಿ ಗಣೇಶ ಹಬ್ಬ ಆಚರಣೆ.. ಯಾವ್ಯಾವ ರಾಜ್ಯಗಳಲ್ಲಿ ಏನೆಲ್ಲಾ ಕ್ರಮ?

ದೇಶದಲ್ಲಿ ಸೆಪ್ಟೆಂಬರ್​ 9 ರಂದು 72,37,84,586 ವ್ಯಾಕ್ಸಿನ್​ ಡೋಸ್​ಗಳನ್ನು ನೀಡಲಾಗಿದೆ. ಭಾರತದಲ್ಲಿ ನಿನ್ನೆ 17,87,611 ಸ್ಯಾಂಪಲ್​ಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಒಟ್ಟು 53,86.04,854 ಮಾದರಿಗಳನ್ನು ಟೆಸ್ಟ್ ಮಾಡಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ.

ABOUT THE AUTHOR

...view details