ನವದೆಹಲಿ: ದೇಶದಲ್ಲಿ ಹೊಸದಾಗಿ 34,703 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಸುಮಾರು 111 ದಿನಗಳ(4 ತಿಂಗಳು) ಬಳಿಕ ಅತೀ ಕಡಿಮೆ ಕೊರೊನಾ ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ ಒಟ್ಟು 51,864 ಮಂದಿ ಗುಣಮುಖರಾಗಿದ್ದು, ಚೇತರಿಕೆ ಪ್ರಮಾಣ ಶೇ. 97.17ರಷ್ಟು ಕಂಡುಬಂದಿದೆ.
4 ತಿಂಗಳ ಬಳಿಕ ತಗ್ಗಿದ COVID ಅಬ್ಬರ: ದೇಶದಲ್ಲಿ ಮೊದಲ ಬಾರಿಗೆ ಅತಿ ಕಡಿಮೆ ಕೇಸ್ ದಾಖಲು
ಇಂದು ದೇಶದಲ್ಲಿ 34,703 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಬರೋಬ್ಬರಿ 4 ತಿಂಗಳ ಬಳಿಕ ಅತೀ ಕಡಿಮೆ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.
Corona
ಭಾರತದಲ್ಲಿ ಇಲ್ಲಿಯವರೆಗೆ 3,06,19,932 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೆ 2,97,52,294 ಮಂದಿ ಚೇತರಿಸಿಕೊಂಡಿದ್ದಾರೆ. ಇಲ್ಲಿಯ ತನಕ 4,03,281 ಮಂದಿ ಸೋಂಕಿತರು ಕೋವಿಡ್ ಮಹಾಮಾರಿಗೆ ಬಲಿಯಾಗಿದ್ದಾರೆ.
ದೇಶದಲ್ಲಿ ಒಟ್ಟು 4,64,357 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಇದುವರೆಗೆ 35,75,53,612 ಮಂದಿಗೆ ವ್ಯಾಕ್ಸಿನ್ ನೀಡಲಾಗಿದೆ.
Last Updated : Jul 6, 2021, 10:07 AM IST