ETV Bharat Karnataka

ಕರ್ನಾಟಕ

karnataka

ETV Bharat / bharat

ಭಾರತದಲ್ಲಿ ಕೋವಿಡ್​ ಸಂಖ್ಯೆಗಳ ಜೊತೆ ಸಾವಿನ ಪ್ರಮಾಣವೂ ಹೆಚ್ಚಳ.. ಜನರಲ್ಲಿ ಕಡಿಮೆಯಾಗ್ತಿದೆಯಾ ಜಾಗೃತಿ? - ಭಾರತ ಕೋವಿಡ್​ ವಿರುದ್ಧ ಹೋರಾಟ

ನಿತ್ಯ ದೇಶದಲ್ಲಿ ಕೊರೊನಾ ಪ್ರಕರಣಗಳು ಏರಿಳಿತ ಕಾಣುತ್ತಿದ್ವು, ಆದರೆ ಇಂದು ಸಾವಿನ ಪ್ರಕರಣಗಳಲ್ಲಿ ಭಾರಿ ಏರಿಕೆ ಕಂಡು ಬಂದಿದೆ . ಇವುಗಳನ್ನು ಅವಲೋಕಿಸಿದ್ರೆ ಜನರಲ್ಲಿ ಜಾಗೃತಿ ಕಡಿಮೆಗೊಳ್ಳುತ್ತಿದೆ ಎಂಬ ಅನುಮಾನಗಳು ಮೂಡುತ್ತಿವೆ.

India covid report, India vaccination report, India fight against Covid, India corona news, ಭಾರತ ಕೋವಿಡ್​ ವರದಿ, ಭಾರತ ಲಸಿಕೆ ವರದಿ, ಭಾರತ ಕೋವಿಡ್​ ವಿರುದ್ಧ ಹೋರಾಟ, ಭಾರತ ಕೊರೊನಾ ಸುದ್ದಿ,
ಭಾರತದಲ್ಲಿ ಕೋವಿಡ್​ ಸಂಖ್ಯೆಗಳ ಜೊತೆ ಸಾವಿನ ಪ್ರಮಾಣವೂ ಹೆಚ್ಚಳ
author img

By

Published : Jan 21, 2022, 9:45 AM IST

Updated : Jan 21, 2022, 9:53 AM IST

ನವದೆಹಲಿ:ದೇಶದಲ್ಲಿ ಹೊಸದಾಗಿ ಕಾಣಿಸಿಕೊಳ್ಳುವ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿತ್ತು. ಆದರೆ ಇಂದು ಸಾವಿನ ಸಂಖ್ಯೆ ಹೆಚ್ಚಾಗಿದೆ. ಇಂದು ಮೂರೂವರೆ ಲಕ್ಷದ ಸನಿಹಕ್ಕೆ ಕೊರೊನಾ ಪ್ರಕರಣಗಳು ಕಂಡು ಬಂದಿವೆ.

ಹೌದು, ಕಳೆದ 24 ಗಂಟೆಯಲ್ಲಿ 3,47,254 ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಹಿಂದಿನ ದಿನಕ್ಕೆ ಹೋಲಿಸಿದರೆ, ಕಳೆದ 24 ಗಂಟೆಗಳಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದಾರೆ. ಒಂದು ದಿನದಲ್ಲಿ 703 ಮಂದಿ ಕೋವಿಡ್​ನಿಂದ ಸಾವನ್ನಪ್ಪಿದ್ದು, 2,51,777 ಸೋಂಕಿನಿಂದ ಗುಣಮುಖರಾಗಿದ್ದಾರೆ.

ಓದಿ:ಬಾಲಿವುಡ್​ ಡ್ಯಾನ್ಸ್​ ಕಿಂಗ್​ ರೆಮೋ ಡಿಸೋಜಾ ಸೋದರ ಮಾವ ಆತ್ಮಹತ್ಯೆಗೆ ಶರಣು!

ದೇಶದಲ್ಲಿ ಒಟ್ಟು ಒಮಿಕ್ರಾನ್​ ಪ್ರಕರಣಗಳ ಸಂಖ್ಯೆ 9,692ಕ್ಕೆ ಏರಿಕೆ ಕಂಡಿದೆ. ಇನ್ನು ದಿನವೊಂದಕ್ಕೆ ಒಮಿಕ್ರಾನ್​ ಸೋಂಕು ಕಾಣಿಸಿಕೊಳ್ಳುವವರ ಪ್ರಮಾಣ ಶೇಕಡಾ 4.36ರಷ್ಟಿದೆ.

ವ್ಯಾಕ್ಸಿನೇಷನ್​: ಈವರೆಗೆ ಸುಮಾರು 160 ಕೋಟಿ ಡೋಸ್​ ವ್ಯಾಕ್ಸಿನೇಷನ್ ನೀಡಲಾಗಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 21, 2022, 9:53 AM IST

ABOUT THE AUTHOR

...view details