ನವದೆಹಲಿ:ಮತ್ತೆ ಹೊಸದಾಗಿ 24 ಗಂಟೆಗಳಲ್ಲಿ ದೇಶದಲ್ಲಿ ಮೂರು ಲಕ್ಷಕ್ಕಿಂತ ಹೆಚ್ಚು (3,32,730) ಕೋವಿಡ್ ಸೋಂಕಿತರು ಪತ್ತೆಯಾಗಿದ್ದು, 2,263 ಮಂದಿ ಒಂದೇ ದಿನದಲ್ಲಿ ಮೃತಪಟ್ಟಿದ್ದಾರೆ. ಭಾರತದಲ್ಲೀಗ ಕೋವಿಡ್ ಕೇಸ್ಗಳ ಸಂಖ್ಯೆ 1,62,63,695 ಹಾಗೂ ಸಾವಿನ ಸಂಖ್ಯೆ 1,86,920ಕ್ಕೆ ಏರಿಯಾಗಿದೆ.
ಭಾರತದಲ್ಲಿ ಕೊರೊನಾರ್ಭಟ: ಒಂದೇ ದಿನ 2,263 ಮಂದಿ ಬಲಿ.. 3,32,730 ಜನರಿಗೆ ಸೋಂಕು - Covid vaccine
09:48 April 23
ಒಂದೇ ದಿನ 2,263 ಜನರನ್ನು ಬಲಿ ಪಡೆದ ಕೊರೊನಾ
ಆಕ್ಸಿಜನ್, ಹಾಸಿಗೆ ಅಭಾವ ಎದುರಿಸುತ್ತಿರುವ ಭಾರತದಲ್ಲಿ ದಿನವೊಂದರಲ್ಲಿ ವಿಶ್ವದಲ್ಲೇ ಅತೀ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಪ್ರಪಂಚದ ಯಾವ ಕೋವಿಡ್ ಪೀಡಿತ ದೇಶಗಳಲ್ಲಿಯೂ ಒಂದೇ ದಿನದಲ್ಲಿ 3 ಲಕ್ಷಕ್ಕಿಂತ ಅಧಿಕ ಕೇಸ್ಗಳು ಪತ್ತೆಯಾಗಿರಲಿಲ್ಲ.
ಇನ್ನು ಸಕ್ರಿಯ ಪ್ರಕರಣಗಳ ಸಂಖ್ಯೆ ದಿಢೀರನೇ 24,28,616ಕ್ಕೆ ಹೆಚ್ಚಳವಾಗಿದ್ದು, ಈವರೆಗೆ ಒಟ್ಟು 1,36,48,159 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಹೊರ ಬಂದಿದ್ದಾರೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
13.54 ಮಂದಿಗೆ ವ್ಯಾಕ್ಸಿನ್
ಜನವರಿ 16ರಿಂದ ಈವರೆಗೆ ಒಟ್ಟು 13,54,78,420 ಮಂದಿಗೆ ವ್ಯಾಕ್ಸಿನ್ ನೀಡಲಾಗಿದೆ. ಮೇ1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದ್ದು, ನಾಳೆಯಿಂದ (ಏಪ್ರಿಲ್ 24) ಕೋವಿನ್ ಪ್ಲಾಟ್‌ಫಾರ್ಮ್‌ನಲ್ಲಿ ಅಥವಾ ಆರೋಗ್ಯಾ ಸೇತು ಆ್ಯಪ್ ಮೂಲಕ ಅರ್ಹರು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.