ನವದೆಹಲಿ:ದೇಶದಲ್ಲಿ ಕೊರೊನಾ ಅಬ್ಬರ ಕಡಿಮೆಯಾಗಿದ್ದು, ಬರೋಬ್ಬರಿ 118 ದಿನಗಳ ಬಳಿಕ ಅತಿ ಕಡಿಮೆ ಪ್ರಕರಣಗಳು ಕಳೆದ 24 ಗಂಟೆಗಳಲ್ಲಿ ದಾಖಲಾಗಿವೆ. ಹೊಸದಾಗಿ 31,443 ಕೇಸ್ ಪತ್ತೆಯಾಗಿದ್ದು, ಚೇತರಿಕೆ ಪ್ರಮಾಣ ಶೇ. 97.28ರಷ್ಟಾಗಿದೆ.
118 ದಿನಗಳ ಬಳಿಕ ದೇಶದಲ್ಲಿ ಅತಿ ಕಡಿಮೆ COVID ಕೇಸ್: 24 ಗಂಟೆಯಲ್ಲಿ 31,443 ಪ್ರಕರಣ ಪತ್ತೆ - ಕೊರೊನಾ ಪ್ರಕರಣ ಸುದ್ದಿ
ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದು, 31,443 ಹೊಸ ಕೇಸ್ಗಳು ಪತ್ತೆಯಾಗಿವೆ. 118 ದಿನಗಳ ಬಳಿಕ ಕಂಡುಬಂದಿರುವ ಅತಿ ಕಡಿಮೆ ಪ್ರಕರಣಗಳು ಇಂದು ಪತ್ತೆಯಾಗಿವೆ. ಪ್ರಸ್ತುತ 4,31,315 ಆ್ಯಕ್ಟಿವ್ ಕೇಸ್ಗಳು ದೇಶದಲ್ಲಿವೆ.
ತಗ್ಗಿದ ಕೊರೊನಾ
ಸಕ್ರಿಯ ಪ್ರಕರಣಗಳು ಸಹ 109 ದಿನಗಳ ಬಳಿಕ ಕಡಿಮೆಯಾಗಿದ್ದು, ಪ್ರಸ್ತುತ 4,31,315 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜುಲೈ 12ರವರೆಗೆ ಒಟ್ಟು 43,40,58,138 ಮಂದಿಯ ಮಾದರಿ ಪರೀಕ್ಷಿಸಲಾಗಿದೆ. ಕಳೆದ 24 ಗಂಟೆಯಲ್ಲಿ 17,40,325 ಜನರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ತಿಳಿಸಿದೆ.