ಕರ್ನಾಟಕ

karnataka

ETV Bharat / bharat

Covid Update: ಹೊಸದಾಗಿ 31,382 ಪ್ರಕರಣಗಳು ಪತ್ತೆ, 318 ಸಾವು - ಕೇಂದ್ರ ಆರೋಗ್ಯ ಸಚಿವಾಲಯ

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 31,382 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 318 ಮಂದಿ ಮೃತಪಟ್ಟಿದ್ದಾರೆ.

Covid
Covid

By

Published : Sep 24, 2021, 10:16 AM IST

ನವದೆಹಲಿ: ಭಾರತದಲ್ಲಿ ಹೊಸದಾಗಿ 31,382 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 3,35,94,803 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 318 ಮಂದಿ ಸೋಂಕಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 4,46,368 ಕ್ಕೆ ಏರಿದೆ.

ನಿನ್ನೆ 32,542 ಮಂದಿ ಕೊರೊನಾದಿಂದ ಗುಣಮುಖರಾಗಿದ್ದು, ಈವರೆಗೆ 3,28,48,273 ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ ದೇಶದಲ್ಲಿ 3,00,162 ಸಕ್ರಿಯ ಪ್ರಕರಣಗಳಿವೆ.

ಸೆಪ್ಟೆಂಬರ್​​ 24 ರಂದು 72,20,642 ಕೋವಿಡ್ ವ್ಯಾಕ್ಸಿನ್​ ಡೋಸ್​ಗಳನ್ನು ನೀಡಲಾಗಿದ್ದು, ಒಟ್ಟಾರೆ 84,15,18,026(84 ಕೋಟಿ) ಲಸಿಕಾ ಡೋಸ್​ಗಳನ್ನು ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಒಂದೇ ದಿನದಲ್ಲಿ 15,65,696 ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಈವರೆಗೆ 55,99,32,709(55ಕೋಟಿ) ಸ್ವ್ಯಾಬ್ ಟೆಸ್ಟ್​​ಗಳನ್ನು ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.

ABOUT THE AUTHOR

...view details