ಕರ್ನಾಟಕ

karnataka

ETV Bharat / bharat

ದೇಶದಲ್ಲಿ ಹೊಸ ಸೋಂಕು ಪ್ರಕರಣಗಳು ಇಳಿಕೆ: ಶನಿವಾರ 4,077 ಜನರು ಬಲಿ - Covid vaccine

ಭಾರತದಲ್ಲಿ ನಿನ್ನೆ ಹೊಸದಾಗಿ ಪತ್ತೆಯಾದ ಕೋವಿಡ್​ ಸೋಂಕಿತರಿಗಿಂತ ಗುಣಮುಖರ ಸಂಖ್ಯೆಯೇ ಜಾಸ್ತಿಯಿದ್ದು, 3,62,437 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

India reports 3,11,170 new COVID19 cases and 4,077 deaths in the last 24 hours
ದೇಶದ ಹೊಸ ಕೋವಿಡ್​ ಕೇಸ್​ನಲ್ಲಿ ಇಳಿಕೆ

By

Published : May 16, 2021, 10:13 AM IST

ನವದೆಹಲಿ:ನಾಲ್ಕು ಲಕ್ಷಕ್ಕೂ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗುತ್ತಿದ್ದ ಭಾರತದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಹೊಸ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡುಬರುತ್ತಿದೆ. ಕಳೆದ 24 ಗಂಟೆಗಳಲ್ಲಿ 3,11,170 ಕೇಸ್ ಮತ್ತು 4,077 ಸಾವು ವರದಿಯಾಗಿದೆ. ದೇಶದಲ್ಲೀಗ ಸೋಂಕಿತರ ಸಂಖ್ಯೆ 2,46,84,077 ಹಾಗೂ ಮೃತರ ಸಂಖ್ಯೆ 2,70,284ಕ್ಕೆ ಏರಿಕೆಯಾಗಿದೆ.

ಶೇ.83.50ರಷ್ಟು ಸೋಂಕಿತರು ಗುಣಮುಖ

ನಿನ್ನೆ ಹೊಸದಾಗಿ ಪತ್ತೆಯಾದ ಸೋಂಕಿತರಿಗಿಂತ ಗುಣಮುಖರ ಸಂಖ್ಯೆಯೇ ಜಾಸ್ತಿಯಿದ್ದು, 3,62,437 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಈವರೆಗೆ ಶೇ.83.50ರಷ್ಟು ಅಂದರೆ ಒಟ್ಟು 2,07,95,335 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇನ್ನು ಸಕ್ರಿಯ ಪ್ರಕರಣಗಳ ಸಂಖ್ಯೆ 36,18,458ಕ್ಕೆ ಹೆಚ್ಚಳವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

17 ಕೋಟಿ ಮಂದಿಗೆ ವ್ಯಾಕ್ಸಿನ್​​

ಜನವರಿ 16ರಿಂದ ಇಲ್ಲಿಯವರೆಗೆ ದೇಶಾದ್ಯಂತ ಒಟ್ಟು 18,22,20,164 ಮಂದಿಗೆ ಲಸಿಕೆ ನೀಡಲಾಗಿದೆ. ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೂ ವ್ಯಾಕ್ಸಿನ್​ ಹಾಕಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದ್ದರೂ, ಲಸಿಕೆಗ ಅಭಾವದಿಂದಾಗಿ ಅನೇಕ ರಾಜ್ಯಗಳಲ್ಲಿ 18 ರಿಂದ 44 ವರ್ಷದ ವಯಸ್ಕರಿಗೆ ವ್ಯಾಕ್ಸಿನೇಷನ್​ ಆರಂಭವಾಗಿಲ್ಲ.

ABOUT THE AUTHOR

...view details