ಕರ್ನಾಟಕ

karnataka

ETV Bharat / bharat

India corona: ತಗ್ಗಿದ ಸೋಂಕಿತರು.. 24 ಗಂಟೆಯಲ್ಲಿ 3.06 ಲಕ್ಷ ಕೊರೊನಾ ಕೇಸ್​ ಪತ್ತೆ!

ಇನ್ನು ದೇಶದಲ್ಲಿ 22,49,335 ಕೊರೊನಾ ಸಕ್ರಿಯ ಪ್ರಕರಣಗಳಿವೆ. ಆಸ್ಪತ್ರೆಯಿಂದ 2,43,495 ಒಂದೇ ದಿನ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟಾರೆ 3,68,04,145 ಗುಣಮುಖರಾಗಿದ್ದಾರೆ. ಅಂದರೆ ಗುಣಮುಖರಾಗುವವರ ಪ್ರಮಾಣ 93.07 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಅಂಕಿ - ಅಂಶಗಳು ದೃಢಪಡಿಸಿವೆ.

cases
ಇಳಿಕೆ

By

Published : Jan 24, 2022, 9:50 AM IST

ನವದೆಹಲಿ:ಕಳೆದ 24 ಗಂಟೆಯಲ್ಲಿ ದೇಶದಲ್ಲಿ 3,06,064 ಕೊರೊನಾ ಕೇಸ್​ ಪತ್ತೆಯಾಗಿದ್ದು, ನಿನ್ನೆಗಿಂತ 27,469 ಕಡಿಮೆ ಸೋಂಕು ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಇನ್ನು ಒಂದೇ ದಿನದಲ್ಲಿ ಕೊರೊನಾ ಮಹಾಮಾರಿಗೆ 439 ಜನರು ಬಲಿಯಾಗಿದ್ದಾರೆ. ಅಲ್ಲದೇ ಸೋಂಕಿನಿಂದ 24 ಗಂಟೆ ಅವಧಿಯೊಳಗೆ 2,43,495 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಅಲ್ಲದೇ, ದೇಶದಲ್ಲೀಗ ದಿನಕ್ಕೆ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವವರ ಪೈಕಿ ಶೇ.20.75 ಜನರಲ್ಲಿ ಕೊರೊನಾ ಪತ್ತೆಯಾಗುತ್ತಿದೆ.

ಇನ್ನು ದೇಶದಲ್ಲಿ 22,49,335 ಕೊರೊನಾ ಸಕ್ರಿಯ ಪ್ರಕರಣಗಳಿವೆ. ಆಸ್ಪತ್ರೆಯಿಂದ 2,43,495ಒಂದೇ ದಿನ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟಾರೆ 3,68,04,145 ಗುಣಮುಖರಾಗಿದ್ದಾರೆ. ಅಂದರೆ ಗುಣಮುಖರಾಗುವವರ ಪ್ರಮಾಣ 93.07 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಅಂಕಿ - ಅಂಶಗಳು ದೃಢಪಡಿಸಿವೆ.

ವ್ಯಾಕ್ಸಿನೇಷನ್​:ಈವರೆಗೆ ಸುಮಾರು 1,62,26,07,516 ಕೋಟಿ ಡೋಸ್​ ವ್ಯಾಕ್ಸಿನೇಷನ್ ನೀಡಲಾಗಿದೆ. ಸೋಮವಾರದ 8 ಗಂಟೆ ಅವಧಿಯೊಳಗಿನ 24 ಗಂಟೆಯಲ್ಲಿ 27,56,364 ಮಂದಿಗೆ ಲಸಿಕೆ ನೀಡಲಾಗಿದೆ.

ಇದನ್ನೂ ಓದಿ:ಫೆಬ್ರವರಿ 6 ರೊಳಗೆ ದೇಶದಲ್ಲಿ ಕೊರೊನಾ 3 ನೇ ಅಲೆ ಉತ್ತುಂಗಕ್ಕೆ: ಅಧ್ಯಯನ

ABOUT THE AUTHOR

...view details