ನವದೆಹಲಿ: ದೇಶದಲ್ಲಿ ಹೊಸದಾಗಿ 30,570 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 431 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಕೇರಳವೊಂದರಲ್ಲೇ 17,681 ಪ್ರಕರಣಗಳು ದಾಖಲಾಗಿದ್ದು, 208 ಮಂದಿ ಸೋಂಕಿಗೆ ಬಲಿಯಾಗಿದ್ದಾರೆಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ದೇಶದಲ್ಲಿ 30,570 COVID ಕೇಸ್ಗಳು ಪತ್ತೆ..ಕೇರಳದಲ್ಲೇ ಅಧಿಕ ಸಾವು - ನೋವು - ಕೇರಳ ಕೊರೊನಾ
ಭಾರತದ ವಿವಿಧ ಭಾಗಗಳಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿದ್ದರೂ, ಕೇರಳದಲ್ಲಿ ಮಾತ್ರ ಸೋಂಕಿನ ಇಳಿಕೆ ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.
![ದೇಶದಲ್ಲಿ 30,570 COVID ಕೇಸ್ಗಳು ಪತ್ತೆ..ಕೇರಳದಲ್ಲೇ ಅಧಿಕ ಸಾವು - ನೋವು COVID](https://etvbharatimages.akamaized.net/etvbharat/prod-images/768-512-13078719-thumbnail-3x2-ddd.jpg)
COVID
ಕಳೆದ 24 ಗಂಟೆಗಳಲ್ಲಿ 15,79,761 ಸ್ಯಾಂಪಲ್ಗಳನ್ನು ಪರೀಕ್ಷೆಗೊಳಪಡಿಸಲಾಗಿದೆ. ನಿನ್ನೆವರೆಗೆ 54,77,01,729 ಗಂಟಲುದ್ರವ ಮಾದರಿಗಳನ್ನು ಟೆಸ್ಟ್ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.