ಕರ್ನಾಟಕ

karnataka

ETV Bharat / bharat

ದೇಶದಲ್ಲಿ ಹೊಸದಾಗಿ 29,616 COVID​ ಸೋಂಕಿತರು ಪತ್ತೆ.. ಕೇರಳದಲ್ಲೇ 17,983 ಕೇಸ್ ವರದಿ - Total number of corona cases and deaths in India

ದೇಶದಲ್ಲಿನ ಒಟ್ಟು ಕೋವಿಡ್​ ಪ್ರಕರಣಗಳ ಪೈಕಿ ಶೇ.97.78 ರಷ್ಟು ಸೋಂಕಿತರು ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ.

Total number of corona cases and deaths in India
Total number of corona cases and deaths in India

By

Published : Sep 25, 2021, 10:48 AM IST

ನವದೆಹಲಿ:ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 29,616 ಮಂದಿ ಕೊರೊನಾ​ ಸೋಂಕಿತರು ಪತ್ತೆಯಾಗಿದ್ದು, 290 ಮಂದಿ ಮೃತಪಟ್ಟಿದ್ದಾರೆ. ಆದರೆ ಇದರಲ್ಲಿ ಕೇರಳ ರಾಜ್ಯದ್ದೇ ಸಿಂಹ ಪಾಲಿದ್ದು, 17,983 ಕೇಸ್​ ಹಾಗೂ 127 ಸಾವು ಇಲ್ಲಿ ವರದಿಯಾಗಿದೆ.

ಇದೀಗ ದೇಶದಲ್ಲಿನ ಒಟ್ಟು ಕೋವಿಡ್​ ಪ್ರಕರಣಗಳ ಸಂಖ್ಯೆ 3.36 ಕೋಟಿ ದಾಟಿದ್ದು, ಹಾಗೂ 4.46 ಲಕ್ಷಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಒಟ್ಟು ಸೋಂಕಿತರ ಪೈಕಿ ಶೇ.97.78 ರಷ್ಟು ಅಂದರೆ 3,28,76,319 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ. ಉಳಿದಂತೆ 3,01,442 ಕೇಸ್​​ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: ಕೋವಿಡ್,​ ನಿಫಾ ವೈರಸ್ ಭೀತಿ: ಅಕ್ಟೋಬರ್ ಅಂತ್ಯದವರೆಗೆ ಮೈಸೂರು - ಕೇರಳ ಸಂಚಾರ ಬಂದ್​

84.89 ಕೋಟಿ ಡೋಸ್​ ವ್ಯಾಕ್ಸಿನೇಷನ್​

ದೇಶಾದ್ಯಂತ ಜನವರಿ 16ರಿಂದ ಕೊರೊನಾ ಲಸಿಕಾಭಿಯಾನ ಆರಂಭಿಸಲಾಗಿದ್ದು, ಈವರೆಗೆ 84,89,29,160 ಡೋಸ್​ ವ್ಯಾಕ್ಸಿನ್​ ನೀಡಲಾಗಿದೆ. ನಿನ್ನೆ ಒಂದೇ ದಿನದಲ್ಲಿ 71,04,051 ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ABOUT THE AUTHOR

...view details