ನವದೆಹಲಿ:ಕಳೆದ 24 ಗಂಟೆಯಲ್ಲಿ 2,85,914 ಹೊಸ ಕೋವಿಡ್ ಕೇಸ್ಗಳು ವರದಿಯಾಗಿವೆ. ನಿನ್ನೆಗಿಂತ ಕೊಂಚ ಹೆಚ್ಚಳ ಕಂಡು ಬಂದಿದೆ. 665 ಮಂದಿ ಕೊರೊನಾಕ್ಕೆ ಬಲಿಯಾಗಿದ್ದಾರೆ. ದೇಶದಲ್ಲಿ ಈವರೆಗೂ ಒಟ್ಟು 4,91,127 ಮಂದಿ ಅಸು ನೀಗಿದ್ದಾರೆ.
ದೇಶದಲ್ಲಿ ಒಟ್ಟಾರೆ ನಿನ್ನೆ 2,99,073 ಮಂದಿ ಕೋವಿಡ್ನಿಂದ ಗುಣಮುಖರಾಗಿದ್ದು, 22,23,018 ಸಕ್ರಿಯ ಪ್ರಕರಣಗಳಿವೆ. ನಿತ್ಯ ಶೇ 16.16ರಷ್ಟು ಜನ ಸೋಂಕಿಗೆ ಒಳಗಾಗುತ್ತಿದ್ದಾರೆ. ಇದುವರೆಗೂ ದೇಶದಲ್ಲಿ ಒಟ್ಟಾರೆ 1,63,58,44,536 ಡೋಸ್ ಲಸಿಕೆಗಳನ್ನು ನೀಡಲಾಗಿದೆ.