ಕರ್ನಾಟಕ

karnataka

ETV Bharat / bharat

ದೇಶದಲ್ಲಿ ಕೊಂಚ ಇಳಿಕೆಯತ್ತ ಮುಖ ಮಾಡಿದ ಕೊರೊನಾ ಪ್ರಕರಣಗಳು! - 541 ಹೊಸ ಕೋವಿಡ್​ ಪ್ರಕರಣಗಳು ಪತ್ತೆಯಾಗಿದ್ದು

India COVID update : ಕಳೆದ 24 ಗಂಟೆಯಲ್ಲಿ ದೇಶದಲ್ಲಿ 2,541 ಹೊಸ ಕೋವಿಡ್​ ಪ್ರಕರಣಗಳು ಪತ್ತೆಯಾಗಿವೆ. 30 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ..

India Covid tracker, Union Ministry of Health and Family Welfare report, India covid cases, India Monday corona report, ಭಾರತದ ಕೋವಿಡ್​ ಸಂಖ್ಯೆ, ಭಾರತದಲ್ಲಿ ಗುರುವಾರದ ಕೋವಿಡ್​ ವರದಿ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕೋವಿಡ್​ ವರದಿ, ಭಾರತ ಕೊರೊನಾ ಪ್ರಕರಣಗಳು,
ಆರೋಗ್ಯ ಇಲಾಖೆ ತಿಳಿಸಿದೆ

By

Published : Apr 25, 2022, 9:54 AM IST

ನವದೆಹಲಿ :ಹೊಸ ಕೋವಿಡ್ ಸೋಂಕುಗಳ ಸಂಖ್ಯೆಯಲ್ಲಿ ಸ್ಥಿರವಾಗಿ ಏರಿಕೆ ಕಾಣುತ್ತಿದ್ದ ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,541 ಹೊಸ ಪ್ರಕರಣಗಳು ದಾಖಲೆಯಾಗುವ ಮೂಲಕ ಕೊಂಚ ಇಳಿಕೆ ಕಂಡಿದೆ. ಪ್ರಕರಣದ ಪಾಸಿಟಿವ್ ದರವು ಶೇ 0.84ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೋಮವಾರ ತಿಳಿಸಿದೆ.

ನಿನ್ನೆಗೆ ಹೋಲಿಸಿದರೆ ದೇಶದಲ್ಲಿ ಇಂದು ಒಟ್ಟು 52 ಕೋವಿಡ್ ಪ್ರಕರಣ ಕಡಮೆಯಾಗಿವೆ. ದೇಶದಲ್ಲಿ ಭಾನುವಾರ 2,593 ಕೋವಿಡ್ ಪ್ರಕರಣ ಪತ್ತೆಯಾಗಿದ್ದವು. ಇದರೊಂದಿಗೆ ದೇಶದಲ್ಲಿ ಸಕ್ರಿಯ ಪ್ರಕರಣಗಳು 16,522 ರಷ್ಟಿವೆ.

ಓದಿ:ದೇಶದಲ್ಲಿ ಕೋವಿಡ್​​ ಉಲ್ಬಣ : 2,593 ಹೊಸ ಪ್ರಕರಣ ಪತ್ತೆ, 44 ಮಂದಿ ಸಾವು

ಕಳೆದ 24 ಗಂಟೆಗಳಲ್ಲಿ ಒಟ್ಟು 1,862 ಕೋವಿಡ್ ರೋಗಿಗಳು ರೋಗದಿಂದ ಚೇತರಿಸಿಕೊಂಡಿದ್ದು, ಸಾಂಕ್ರಾಮಿಕ ರೋಗದ ಪ್ರಾರಂಭದಿಂದ ಒಟ್ಟು ಚೇತರಿಕೆಯ ಸಂಖ್ಯೆ 4,25,21,314ಕ್ಕೆ ತಲುಪಿದೆ. ಚೇತರಿಕೆ ಪ್ರಮಾಣ ಶೇ. 98.75 ರಷ್ಟಿದೆ. ಸಚಿವಾಲಯದ ಪ್ರಕಾರ ಇಂದು 30 ರೋಗಿಗಳು ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ.

ಈ ಮೂಲಕ ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 5,22,223ಕ್ಕೆ ತಲುಪಿದೆ. ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ನಿರ್ವಹಿಸಲಾದ ಒಟ್ಟು ಲಸಿಕೆ ಡೋಸ್​ಗಳ ಸಂಖ್ಯೆ 1,87,71,95,781ಕ್ಕೆ ಆಗಿದೆ.

For All Latest Updates

TAGGED:

ABOUT THE AUTHOR

...view details