ಕರ್ನಾಟಕ

karnataka

ETV Bharat / bharat

1.80 ಲಕ್ಷ ಸನಿಹಕ್ಕೆ ಬಂದ ಕೊರೊನಾ ಪ್ರಕರಣಗಳು.. ದೇಶದಲ್ಲಿ ಕೋವಿಡ್​ ಆತಂಕ! - ಕೋವಿಡ್​ ವಿರುದ್ಧ ಭಾರತದ ಹೋರಾಟ

ಕಳೆದ 24 ಗಂಟೆಗಳಲ್ಲಿ 1.80 ಲಕ್ಷ ಸನಿಹಕ್ಕೆ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ದೇಶದಲ್ಲಿ ಕೋವಿಡ್​ ಆತಂಕ ದಿನದಿಂದ ದಿನ ಹೆಚ್ಚುತ್ತಲೇ ಇದೆ.

Fresh covid cases cross one lakh mark, one lakh corona cases in India, India covid reports, India fight against Covid, India omicron news, ಒಂದು ಲಕ್ಷ ಗಡಿ ದಾಟಿದ ಕೋವಿಡ್​ ಪ್ರಕರಣಗಳು, ಭಾರತದಲ್ಲಿ ಒಂದು ಲಕ್ಷ ಕೊರೊನಾ ಪ್ರಕರಣಗಳು, ಭಾರತ ಕೋವಿಡ್​ ವರದಿ, ಕೋವಿಡ್​ ವಿರುದ್ಧ ಭಾರತದ ಹೋರಾಟ, ಭಾರತ ಒಮಿಕ್ರಾನ್​ ಸುದ್ದಿ,
ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್​ ಆತಂಕ

By

Published : Jan 10, 2022, 10:05 AM IST

Updated : Jan 10, 2022, 10:27 AM IST

ನವದೆಹಲಿ:ಕಳೆದ 24 ಗಂಟೆಗಳಲ್ಲಿ ಕೊರೊನಾ ಪ್ರಕರಣಗಳಲ್ಲಿ ತೀವ್ರ ಬೆಳವಣಿಗೆ ಕಂಡು ಬಂದಿದೆ. ದಿನದಿಂದ ದಿನಕ್ಕೆ ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆತಂಕ ವ್ಯಕ್ತಪಡಿಸಿದೆ.

ಕೊರೊನಾ ಪ್ರಕರಣಗಳು:ದೇಶದಲ್ಲಿ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಭಾನುವಾರ ಬೆಳಗ್ಗೆಯಿಂದ ಸೋಮವಾರ ಬೆಳಗಿನ ವರೆಗೆ 1,79,723 ಮಂದಿಗೆ ಸೋಂಕು ತಗುಲಿದೆ. ಇನ್ನೂ 146 ಮಂದಿ ಕರೋನಾದಿಂದ ಸಾವನ್ನಪ್ಪಿದ್ದಾರೆ. 46,569 ಜನರು ವೈರಸ್‌ನಿಂದ ಚೇತರಿಸಿಕೊಂಡಿದ್ದಾರೆ. ಕೋವಿಡ್ ಹರಡುವಿಕೆಯ ಹಿನ್ನೆಲೆ ದೇಶದಲ್ಲಿ ಪಾಸಿಟಿವ್​ ದರ ಶೇ. 13.29 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

  • ಒಟ್ಟು ಪ್ರಕರಣಗಳು: 3,57,07,727
  • ಒಟ್ಟು ಸಾವುಗಳು: 4,83,936
  • ಸಕ್ರಿಯ ಪ್ರಕರಣಗಳು: 7,23,619
  • ಒಟ್ಟು ಗುಣಮುಖರಾದವರು: 3,45,00172

ಒಮಿಕ್ರಾನ್​ ವ್ಯಾಪ್ತಿ:ಈಗಾಗಲೇ ದೇಶದಲ್ಲಿ ಕ್ರಮವಾಗಿ ಒಮಿಕ್ರಾನ್​ ತನ್ನ ಅಲೆಯನ್ನು ವೃದ್ಧಿಸುತ್ತಿದೆ. ದೇಶದ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 4,033 ಒಮಿಕ್ರಾನ್​ ಪತ್ತೆಯಾಗಿದೆ.

ಭಾರತದಲ್ಲಿ ವ್ಯಾಕ್ಸಿನೇಷನ್:ದೇಶದಲ್ಲಿ ಲಸಿಕೆ ವಿತರಣೆ ವೇಗವಾಗಿ ಮುಂದುವರೆದಿದೆ. ಭಾನುವಾರ ಒಂದೇ ದಿನದಲ್ಲಿ 29,60,975 ಡೋಸ್ ನೀಡಲಾಗಿದೆ. ಪರಿಣಾಮವಾಗಿ, ಇದುವರೆಗೆ ವಿತರಿಸಲಾದ ಡೋಸ್‌ಗಳ ಸಂಖ್ಯೆ 1,51,94,05,951 ತಲುಪಿದೆ.

ವಿಶ್ವದಾದ್ಯಂತ:ವಿಶ್ವದ ಕೊರೊನಾ ಪ್ರಕರಣಗಳು: ಕೊರೊನಾ ತೀವ್ರತೆ ವಿಶ್ವಾದ್ಯಂತ ಮುಂದುವರೆದಿದೆ. ಭಾನುವಾರವಷ್ಟೇ 1,856,698 ಮಂದಿಗೆ ಸೋಂಕು ತಗುಲಿದೆ. ಇದರಿಂದಾಗಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 30,78,83,849 ದಾಟಿದೆ. ಇನ್ನು 3,318 ಮಂದಿ ಪ್ರಾಣ ಕಳೆದುಕೊಂಡಿದ್ದು, ಒಟ್ಟು ಸಾವಿನ ಸಂಖ್ಯೆ 55,05,854ಕ್ಕೆ ಏರಿಕೆಯಾಗಿದೆ.

  • ಇತ್ತೀಚೆಗೆ ಅಮೆರಿಕದಲ್ಲಿ 3,08,616 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಇನ್ನು 308 ಮಂದಿ ಸಾವನ್ನಪ್ಪಿದ್ದಾರೆ.
  • ಫ್ರಾನ್ಸ್‌ನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದೆ. ಒಟ್ಟು 2,96,097 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 90 ಜನರು ಮೃತಪಟ್ಟಿದ್ದಾರೆ
  • ಬ್ರಿಟನ್‌ನಲ್ಲೂ ಕೊರೊನಾ ಅಬ್ಬರ ಮುಂದುವರಿದಿದೆ. ಒಂದೇ ದಿನದಲ್ಲಿ 1,41,472 ಪ್ರಕರಣಗಳು ಬೆಳಕಿಗೆ ಬಂದಿದ್ದು, 97 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ
  • ಇತ್ತೀಚೆಗೆ ಇಟಲಿಯಲ್ಲಿ 1,55,659 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 157 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ
  • ಆಸ್ಟ್ರೇಲಿಯಾದಲ್ಲಿ 1,00,571 ಹೊಸ ವೈರಸ್ ಪ್ರಕರಣಗಳು ಬೆಳಕಿಗೆ ಬಂದಿದ್ದು, 23 ಮಂದಿ ಸಾವನ್ನಪ್ಪಿದ್ದಾರೆ
  • ಒಂದೇ ದಿನದಲ್ಲಿ ಅರ್ಜೆಂಟೀನಾದಲ್ಲಿ 73,319 ಪ್ರಕರಣಗಳು ವರದಿಯಾಗಿದ್ದು, 27 ಜನರನ್ನು ಬಲಿ ಪಡೆದಿದೆ
  • ಟರ್ಕಿಯಲ್ಲಿ 61,727 ಹೊಸ ಪ್ರಕರಣಗಳು ವರದಿಯಾಗಿದ್ದು, ವೈರಸ್‌ನಿಂದ 141 ಜನರು ಮರಣ ಹೊಂದಿದ್ದಾರೆ
Last Updated : Jan 10, 2022, 10:27 AM IST

ABOUT THE AUTHOR

...view details