ಕರ್ನಾಟಕ

karnataka

ETV Bharat / bharat

ದಾಖಲೆ ಸಂಖ್ಯೆಯಲ್ಲಿ ಕೋವಿಡ್​ ಸಾವು-ನೋವು: ನಿನ್ನೆ 1.68 ಲಕ್ಷ ಕೇಸ್​ ಪತ್ತೆ, 904 ಮಂದಿ ಬಲಿ - ಆರೋಗ್ಯ ಇಲಾಖೆ ಟ್ವೀಟ್​

ಮಹಾರಾಷ್ಟ್ರ, ಕರ್ನಾಟಕ, ಛತ್ತೀಸ್​ಗಢ, ಉತ್ತರ ಪ್ರದೇಶ ಹಾಗೂ ಕೇರಳ - ಈ 5 ರಾಜ್ಯಗಳಲ್ಲಿ ಶೇ.70ರಷ್ಟು ಕೇಸ್​ಗಳು ಸಕ್ರಿಯವಾಗಿದ್ದು, ಜನರು ಕೋವಿಡ್​ ನಿಯಮಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಯಾವುದೇ ಸಮಯದಲ್ಲೂ ಲಾಕ್​ಡೌನ್​ ಜಾರಿಯಾಗುವ ಸಾಧ್ಯತೆಯಿದೆ.

India reports 1,68,912 new COVID19 case & 904 deaths in last 24 hours
ದಾಖಲೆ ಸಂಖ್ಯೆಯಲ್ಲಿ ಕೋವಿಡ್​ ಸಾವು-ನೋವು

By

Published : Apr 12, 2021, 10:11 AM IST

ನವದೆಹಲಿ:ಮೊದಲನೇ ಕೊರೊನಾ ಅಲೆಯಲ್ಲಿ ದಿನವೊಂದರಲ್ಲಿ ವರದಿಯಾಗುತ್ತಿದ್ದ ಪ್ರಕರಣಗಳಿಗಿಂತಲೂ ಈಗ ಉಲ್ಬಣಗೊಂಡಿರುವ ಎರಡನೇ ಅಲೆಯಲ್ಲಿ ದುಪ್ಪಟ್ಟು ಕೇಸ್​ಗಳು ಪತ್ತೆಯಾಗುತ್ತಿವೆ. ದಿನದಿನಕ್ಕೂ ದಾಖಲೆ ಮಟ್ಟದಲ್ಲಿ ಜನರಿಗೆ ವೈರಸ್​ ಅಂಟುತ್ತಿದೆ.

ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 1,68,912 ಸೋಂಕಿತರು ಪತ್ತೆಯಾಗಿದ್ದಾರೆ. ಹಲವು ತಿಂಗಳ ಬಳಿಕ 904 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಇದೀಗ ದೇಶದಲ್ಲಿ ಕೋವಿಡ್​ ಕೇಸ್​ಗಳ ಸಂಖ್ಯೆ 1,35,27,717 ಹಾಗೂ ಮೃತರ ಸಂಖ್ಯೆ 1,70,179ಕ್ಕೆ ಏರಿಕೆಯಾಗಿದೆ. ಭಾನುವಾರ 75,086 ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡಿದ್ದು, ಈವರೆಗೆ ಒಟ್ಟು 1,21,56,529 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಮತ್ತೆ ಲಾಕ್​ಡೌನ್​ ಸಾಧ್ಯತೆ

ಆ್ಯಕ್ಟಿವ್​ ಕೇಸ್​ಗಳು ಕೂಡ ದಿಢೀರನೇ 1 ಲಕ್ಷದಿಂದ 12,01,009ಕ್ಕೆ ಹೆಚ್ಚಳವಾಗಿದೆ. ಮಹಾರಾಷ್ಟ್ರ, ಕರ್ನಾಟಕ, ಛತ್ತೀಸ್​ಗಢ, ಉತ್ತರ ಪ್ರದೇಶ ಹಾಗೂ ಕೇರಳ - ಈ 5 ರಾಜ್ಯಗಳಲ್ಲಿ ಶೇ.70ರಷ್ಟು ಕೇಸ್​ಗಳು ಸಕ್ರಿಯವಾಗಿದ್ದು, ಜನರು ಕೋವಿಡ್​ ನಿಯಮಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಯಾವುದೇ ಸಮಯದಲ್ಲೂ ಲಾಕ್​ಡೌನ್​ ಜಾರಿಯಾಗುವ ಸಾಧ್ಯತೆಯಿದೆ.

10.45 ಕೋಟಿ ಮಂದಿಗೆ ವ್ಯಾಕ್ಸಿನ್​​

2021ರ ಜನವರಿ 16ರಿಂದ ದೇಶಾದ್ಯಂತ ಕೋವಿಡ್​ ಲಸಿಕೆ ಹಾಕಲು ಆರೋಗ್ಯ ಇಲಾಖೆ ಆರಂಭಿಸಿದ್ದು, ಈವರೆಗೆ 10,45,28,565 ವ್ಯಾಕ್ಸಿನ್​​ ಪಡೆದಿದ್ದಾರೆ. 85 ದಿನಗಳಲ್ಲಿ 100 ಮಿಲಿಯನ್​ ವ್ಯಾಕ್ಸಿನ್ ಡೋಸ್​ಗಳನ್ನು ನೀಡಿರುವುದು ದೊಡ್ಡ ಸಾಧನೆ ಎಂದು ಸಚಿವಾಲಯ ತಿಳಿಸಿದೆ. ಆದರೆ ಅನೇಕ ರಾಜ್ಯಗಳು ಲಸಿಕೆಯ ಅಭಾವ ಎದುರಿಸುತ್ತಿವೆ.

ABOUT THE AUTHOR

...view details