ಕರ್ನಾಟಕ

karnataka

ETV Bharat / bharat

ಹಲವು ತಿಂಗಳ ಬಳಿಕ ದೇಶದಲ್ಲಿ ಅತಿಕಡಿಮೆ ಕೋವಿಡ್​ ಕೇಸ್​ ಪತ್ತೆ; ಆದ್ರೂ ಎಚ್ಚರ ಅಗತ್ಯ - ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ

ಭಾರತದಲ್ಲಿ ನಿನ್ನೆ ಒಂದೇ ದಿನ 9,83,695 ಜನರಿಗೆ ಕೋವಿಡ್​ ಟೆಸ್ಟ್ ಮಾಡಲಾಗಿದ್ದು, ಇವರಲ್ಲಿ 16,432 ಮಂದಿಯ ವರದಿ ಪಾಸಿಟಿವ್​ ಮಂದಿದೆ.

India reports 16,432 new COVID-19 cases and 252 deaths in last 24 hours
98 ಲಕ್ಷ ಸೋಂಕಿತರು ಗುಣಮುಖ

By

Published : Dec 29, 2020, 10:20 AM IST

ನವದೆಹಲಿ: ಕೆಲವು ತಿಂಗಳುಗಳ ಹಿಂದೆ ಭಾರತದಲ್ಲಿ ಕೋವಿಡ್​ ಆರ್ಭಟ ಹೆಚ್ಚಾಗಿತ್ತು. ಆಗ ಪ್ರತಿನಿತ್ಯ ಲಕ್ಷ ಸನಿಹ ಸೋಂಕಿತರು ಪತ್ತೆಯಾಗುತ್ತಿದ್ದರು. ನಿಧಾನವಾಗಿ ಈ ಸಂಖ್ಯೆ ಅರ್ಧಲಕ್ಷಕ್ಕೆ ತಲುಪಿತ್ತು. ಆದರೆ ಸೋಮವಾರ 20 ಸಾವಿರ ಗಡಿಯಿಂದ ಕೆಳಗಿಳಿದು ಅತಿಕಡಿಮೆ ಪ್ರಕರಣಗಳು ಪತ್ತೆಯಾಗಿವೆ.

ಕಳೆದ 24 ಗಂಟೆಗಳಲ್ಲಿ 16,432 ಕೋವಿಡ್​ ಪ್ರಕರಣಗಳು ವರದಿಯಾಗಿದ್ದು, 252 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 1,02,24,303 ಹಾಗೂ ಮೃತರ ಸಂಖ್ಯೆ 1,48,153ಕ್ಕೆ ಏರಿಕೆಯಾಗಿದೆ.

ಓದಿ:ಭಾರತಕ್ಕೂ ಕಾಲಿಟ್ಟ ರೂಪಾಂತರಗೊಂಡ ಕೊರೊನಾ ವೈರಸ್

ಒಟ್ಟು ಸೋಂಕಿತರ ಪೈಕಿ 98 ಲಕ್ಷ (98,07,569) ಮಂದಿ ಮಹಾಮಾರಿಯಿಂದ ಚೇತರಿಸಿಕೊಂಡಿದ್ದು, 2,68,581 ಕೇಸ್​​ಗಳು ಮಾತ್ರ ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಡಿಸೆಂಬರ್​ 28ರ ವರೆಗೆ 16,98,01,74 ಜನರಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದ್ದು, ನಿನ್ನೆ ಒಂದೇ ದಿನ 9,83,695 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.

ಎಚ್ಚರ!

ಇಂಗ್ಲೆಂಡ್​ನಲ್ಲಿ ರೂಪಾಂತರಗೊಂಡ ಕೊರೊನಾ ವೈರಸ್​ ಭಾರತಕ್ಕೂ ಕಾಲಿಟ್ಟಿದೆ. ಬ್ರಿಟನ್​ನಿಂದ ಹಿಂದಿರುಗಿದ ಆರು ಮಂದಿಯಲ್ಲಿ ಹೊಸ ತಳಿಯ ವೈರಸ್​ ಪತ್ತೆಯಾಗಿದೆ. ಹೀಗಾಗಿ ಜನರು ಇನ್ನಷ್ಟು ಮುನ್ನೆಚ್ಚರಿಕೆ ವಹಿಸುವುದು ಅವಶ್ಯ ಹಾಗೂ ಅನಿವಾರ್ಯವಾಗಿದೆ.

ABOUT THE AUTHOR

...view details