ಕರ್ನಾಟಕ

karnataka

ETV Bharat / bharat

ದೇಶದಲ್ಲಿ ಮತ್ತೆ ಕೋವಿಡ್​ ತಲ್ಲಣ.. ಒಂದೇ ದಿನದಲ್ಲಿ 666 ಮಂದಿ ಬಲಿ

ಕಳೆದ 24 ಗಂಟೆಗಳಲ್ಲಿ 16,326 ಹೊಸ ಕೋವಿಡ್​ ಪ್ರಕರಣಗಳು ಪತ್ತೆಯಾಗಿದ್ದು, 666 ಮಂದಿ ಸಾವನ್ನಪ್ಪಿದ್ದಾರೆ.

ಕೋವಿಡ್​ ಮೃತರ ಸಂಖ್ಯೆಯಲ್ಲಿ ದಿಢೀರ್​ ಏರಿಕೆ
ಕೋವಿಡ್​ ಮೃತರ ಸಂಖ್ಯೆಯಲ್ಲಿ ದಿಢೀರ್​ ಏರಿಕೆ

By

Published : Oct 23, 2021, 10:10 AM IST

ನವದೆಹಲಿ: ಕಳೆದ ಕೆಲ ದಿನಗಳಿಂದ ಕೊರೊನಾಗೆ ಪ್ರತಿನಿತ್ಯ ಬಲಿಯಾಗುತ್ತಿರುವ ಸಂಖ್ಯೆ 300ರ ಗಡಿಯೊಳಗೆ ಇರುತ್ತಿತ್ತು. ಆದರೆ ಇದೀಗ ಸಾವಿನ ಸಂಖ್ಯೆಯಲ್ಲಿ ದಿಢೀರ್ ಏರಿಕೆ ಕಂಡಿದ್ದು, ನಿನ್ನೆ ಒಂದೇ ದಿನ 666 ಮಂದಿ ಮೃತಪಟ್ಟಿದ್ದಾರೆ.

ಕಳೆದ 24 ಗಂಟೆಗಳಲ್ಲಿ 16,326 ಹೊಸ ಕೋವಿಡ್​ ಪ್ರಕರಣಗಳು ಪತ್ತೆಯಾಗಿದ್ದು, 17,677 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಹೊರಬಂದಿದ್ದಾರೆ. ಇಲ್ಲಿಯವರೆಗೆ ಶೇ.98.16 ಅಂದರೆ ಒಟ್ಟು 3,35,32,126 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಇದನ್ನೂ ಓದಿ: ಇಂದು 'ಆತ್ಮನಿರ್ಭರ ಭಾರತ ಸ್ವಯಂಪೂರ್ಣ ಗೋವಾ' ಫಲಾನುಭವಿಗಳ ಜತೆ ಪ್ರಧಾನಿ ಮೋದಿ ಸಂವಾದ

2020ರ ಮಾರ್ಚ್​ ಬಳಿಕ ಆ್ಯಕ್ಟಿವ್​​ ಕೇಸ್​ಗಳ ಪ್ರಮಾಣ ಶೇ.0.51ಕ್ಕೆ ಇಳಿಕೆ ಕಂಡಿದ್ದು, ಸದ್ಯ 1,73,728 ಪ್ರಕರಣಗಳು ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

101.30 ಕೋಟಿ ಡೋಸ್​ ವ್ಯಾಕ್ಸಿನೇಷನ್​

ಕೋವಿಡ್​ ವ್ಯಾಕ್ಸಿನೇಷನ್​ನಲ್ಲಿ ಐತಿಹಾಸಿಕ ಮೈಲಿಗಲ್ಲು ಸಾಧಿಸಿರುವ ಭಾರತ ಈವರೆಗೆ 101.30 ಕೋಟಿಗೂ ಅಧಿಕ ಡೋಸ್​ ವ್ಯಾಕ್ಸಿನ್ ವಿತರಿಸಿದೆ.

ABOUT THE AUTHOR

...view details