ನವದೆಹಲಿ: ದಿನವೊಂದರಲ್ಲಿ ಪತ್ತೆಯಾಗುವ ಕೋವಿಡ್ ಕೇಸ್ಗಳ ಪೈಕಿ ಈಗಾಗಲೇ ಅಮೆರಿಕವನ್ನೂ ಹಿಂದಿಕ್ಕಿರುವ ಭಾರತದಲ್ಲಿ ಸೋಮವಾರ ಒಂದೇ ದಿನ 1,61,736 ಪ್ರಕರಣಗಳು ಹಾಗೂ 879 ಸಾವುಗಳು ಸಂಭವಿಸಿವೆ. 24 ಗಂಟೆಗಳಲ್ಲಿ 97,168 ಸೋಂಕಿತರು ಗುಣಮುಖರಾಗಿದ್ದಾರೆ.
ದೇಶದಲ್ಲೀಗ ಸೋಂಕಿತರ ಸಂಖ್ಯೆ 1,36,89,453, ಮೃತರ ಸಂಖ್ಯೆ 1,71,058, ಗುಣಮುಖರ ಸಂಖ್ಯೆ 1,22,53,697 ಹಾಗೂ ಸಕ್ರಿಯ ಪ್ರಕರಣಗಳ ಸಂಖ್ಯೆ 12,64,698ಕ್ಕೆ ಹೆಚ್ಚಳವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಮಹಾರಾಷ್ಟ್ರ, ಕರ್ನಾಟಕ, ಛತ್ತೀಸ್ಗಢ, ಉತ್ತರ ಪ್ರದೇಶ ಹಾಗೂ ಕೇರಳ - ಈ 5 ರಾಜ್ಯಗಳಲ್ಲಿ ಶೇ.70ರಷ್ಟು ಕೇಸ್ಗಳು ಆ್ಯಕ್ಟಿವ್ ಆಗಿವೆ.
5 ರಾಜ್ಯಗಳಲ್ಲಿ ಶೇ.70ರಷ್ಟು ಕೇಸ್ಗಳು ಆ್ಯಕ್ಟಿವ್ ಹೆಚ್ಚಿನ ಓದಿಗೆ:ಯುಗಾದಿಗೆ ಸಿಹಿ ಸುದ್ದಿ.. 'ಸ್ಪುಟ್ನಿಕ್ ವಿ' ಲಸಿಕೆ ಬಳಕೆಗೆ ಡಿಸಿಜಿಐನಿಂದಲೂ ಸಿಕ್ತು ಅನುಮೋದನೆ
ಜನವರಿ 16ರಿಂದ ಈವರೆಗೆ ಒಟ್ಟು 10,85,33,08 ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಇಲ್ಲಿಯವರೆಗೆ ದೇಶೀಯ ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ನೀಡಲಾಗುತ್ತಿದ್ದು, ರಷ್ಯಾದ ಸ್ಪುಟ್ನಿಕ್-ವಿ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿದ್ದರಿಂದ ಮೂರನೇ ಲಸಿಕೆ ಭಾರತದಲ್ಲಿ ಲಭ್ಯವಾಗಲಿದೆ.
ಕೋವಿಡ್ ಟೆಸ್ಟಿಂಗ್ ಅಪ್ಡೇಟ್ಸ್ ಏಪ್ರಿಲ್ 12ರ ವರೆಗೆ 25,92,07,108 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 14,00,122 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.