ಕರ್ನಾಟಕ

karnataka

ETV Bharat / bharat

ನಿನ್ನೆಗಿಂತ ಕೊಂಚ ಇಳಿಕೆ ಕಂಡ ಕೊರೊನಾ: ಆದರೆ 90 ಸಾವಿರದ ಗಡಿದಾಟಿದ ಸಕ್ರಿಯ ಪ್ರಕರಣಗಳು! - ಭಾರತ ಕೊರೊನಾ ಸಾವಿನ ವರದಿ

ದೇಶದಲ್ಲಿ ಮಹಾಮಾರಿ ಕೋವಿಡ್ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಇಂದು ಕೊಂಚ ಇಳಿಕೆ ಕಂಡಿದ್ದು, ಸಂಪೂರ್ಣ ಮಾಹಿತಿ ತಿಳಿಯೋಣಾ ಬನ್ನಿ

India covid report, India covid recovery report, India covid Vaccine report, India corona death report, ಭಾರತ ಕೋವಿಡ್ ವರದಿ, ಭಾರತ ಕೋವಿಡ್ ಚೇತರಿಕೆ ವರದಿ, ಭಾರತ ಕೋವಿಡ್ ಲಸಿಕೆ ವರದಿ, ಭಾರತ ಕೊರೊನಾ ಸಾವಿನ ವರದಿ,
ಇಂದು ದೇಶದಲ್ಲಿ ಸುಮಾರು 1500ರಷ್ಟು ಇಳಿಕೆ ಕೊರೊನಾ ಸಂಖ್ಯೆ

By

Published : Jun 25, 2022, 11:20 AM IST

ನವದೆಹಲಿ: ಭಾರತದಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಕೋವಿಡ್ ಸೋಂಕಿತರ ಪ್ರಕರಣಗಳಲ್ಲಿ ಇಂದು ಕೊಂಚ ಇಳಿಕೆ ಕಂಡು ಬಂದಿದೆ. ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 15,940 ಹೊಸ ಕೇಸ್​​​ಗಳು ದೃಢಪಟ್ಟಿದ್ದು, 20 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕಳೆದೊಂದು ದಿನದಲ್ಲಿ 12,425 ಜನರು ಕೋವಿಡ್​​ನಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್​​ ಆಗಿದ್ದಾರೆ. ಈವರೆಗೆ ಒಟ್ಟು 4,27,61,481 ಜನರು ಗುಣಮುಖರಾಗಿದ್ದಾರೆ. ಸದ್ಯಕ್ಕೆ ದೇಶದಲ್ಲಿ 91,779 ಸಕ್ರಿಯ ಪ್ರಕರಣಗಳಿವೆ. ಒಟ್ಟು ಸಾವಿನ ಸಂಖ್ಯೆ 5,24,974 ಕ್ಕೆ ಏರಿಕೆಯಾಗಿದೆ.

ಓದಿ:ದೇಶದಲ್ಲಿ ಏರುತ್ತಿರುವ ಕೊರೊನಾ ಸಂಖ್ಯೆ.. ಇಂದಿನ ಮಾಹಿತಿ ಇಲ್ಲಿದೆ..

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಪ್ರಕಾರ, ಇಲ್ಲಿಯವರೆಗೆ 86.06 ಮಂದಿಯ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ ಶುಕ್ರವಾರ 3,63,103 ಮಂದಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದೆ. ಪ್ರಸ್ತುತ ಚೇತರಿಕೆಯ ಪ್ರಮಾಣವು ಪ್ರಸ್ತುತ ಶೇ 98.58 ರಷ್ಟಿದ್ದು, ದೈನಂದಿನ ಪಾಸಿಟಿವಿಟಿ ದರವು ಶೇ 4.39 ರಷ್ಟಿದೆ. ಇಲ್ಲಿಯವರೆಗೆ 196.94 ಕೋಟಿ ಕೊರೊನಾ ಡೋಸ್​ಗಳನ್ನು ನೀಡಲಾಗಿದೆ.

ABOUT THE AUTHOR

...view details