ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 15,786 ಕೋವಿಡ್ ಸೋಂಕಿತರು ಪತ್ತೆಯಾಗಿದ್ದು, 231 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಕೇರಳದಲ್ಲೇ 8,733 ಪ್ರಕರಣಗಳು ವರದಿಯಾಗಿವೆ.
ನಿನ್ನೆ ಒಂದೇ ದಿನ 18,641 ಸೋಂಕಿತರು ಆಸ್ಪತ್ರೆಯಿಂದ ಹೊರಬಂದಿದ್ದು, ಇಲ್ಲಿಯವರೆಗೆ ಶೇ.98.15 ಅಂದರೆ ಒಟ್ಟು 3,35,14,449 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇನ್ನು 232 ದಿನಗಳ ಬಳಿಕ ಆ್ಯಕ್ಟಿವ್ ಕೇಸ್ಗಳ ಪ್ರಮಾಣ ಶೇ.0.51ಕ್ಕೆ ಇಳಿಕೆ ಕಂಡಿದ್ದು, ಸದ್ಯ 1,75,745 ಪ್ರಕರಣಗಳು ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.