ಕರ್ನಾಟಕ

karnataka

By

Published : Oct 25, 2021, 10:32 AM IST

ETV Bharat / bharat

ದೇಶದಲ್ಲಿ ನಿನ್ನೆ 14,306 ಕೋವಿಡ್​ ಕೇಸ್, 443 ಸಾವು: ಡೆಲ್ಟಾ ಪ್ಲಸ್​ ಹರಡದಂತೆ ಕಟ್ಟೆಚ್ಚರ

ದೇಶದಲ್ಲಿ ಒಟ್ಟು ಕೊರೊನಾ ಕೇಸ್​ಗಳ ಸಂಖ್ಯೆ 3,41,89,774ಕ್ಕೆ ಏರಿಕೆಯಾಗಿದೆ. ಈ ಪೈಕಿ ಶೇ.98.18 ಅಂದರೆ ಒಟ್ಟು 3,35,67,367 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ದೇಶದಲ್ಲಿ ನಿನ್ನೆ 14,306 ಕೋವಿಡ್​ ಕೇಸ್, 443 ಸಾವು ವರದಿ
ದೇಶದಲ್ಲಿ ನಿನ್ನೆ 14,306 ಕೋವಿಡ್​ ಕೇಸ್, 443 ಸಾವು ವರದಿ

ನವದೆಹಲಿ:ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 14,306 ಕೋವಿಡ್​ ಸೋಂಕಿತರು ಪತ್ತೆಯಾಗಿದ್ದು, 443 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಕೇರಳದಲ್ಲೇ 8,538 ಪ್ರಕರಣಗಳು ಹಾಗೂ 71 ಸಾವು ವರದಿಯಾಗಿವೆ. ದೇಶದಲ್ಲಿ ಒಟ್ಟು ಕೊರೊನಾ ಕೇಸ್​ಗಳ ಸಂಖ್ಯೆ 3,41,89,774 ಹಾಗೂ ಮೃತರ ಸಂಖ್ಯೆ 4,54,712ಕ್ಕೆ ಹೆಚ್ಚಳವಾಗಿದೆ.

ನಿನ್ನೆ ಒಂದೇ ದಿನ 18,762 ಸೋಂಕಿತರು ಆಸ್ಪತ್ರೆಯಿಂದ ಹೊರಬಂದಿದ್ದು, ಇಲ್ಲಿಯವರೆಗೆ ಶೇ.98.18 ಅಂದರೆ ಒಟ್ಟು 3,35,67,367 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಬಳಿಕ ಆ್ಯಕ್ಟಿವ್​​ ಕೇಸ್​ಗಳ ಪ್ರಮಾಣ ಶೇ.0.49ಕ್ಕೆ ಇಳಿಕೆ ಕಂಡಿದ್ದು, ಸದ್ಯ 1,67,695 ಪ್ರಕರಣಗಳು ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

102.27 ಕೋಟಿ ಡೋಸ್​ ವ್ಯಾಕ್ಸಿನೇಷನ್​

ಕೋವಿಡ್​ ವ್ಯಾಕ್ಸಿನೇಷನ್​ನಲ್ಲಿ ಐತಿಹಾಸಿಕ ಮೈಲಿಗಲ್ಲು ಸಾಧಿಸಿರುವ ಭಾರತ ಈವರೆಗೆ 102.27 ಕೋಟಿಗೂ ಅಧಿಕ ಡೋಸ್​ ವ್ಯಾಕ್ಸಿನ್ ವಿತರಿಸಿದೆ.

ಇದನ್ನೂ ಓದಿ: ಎಚ್ಚರ..! ಏಷ್ಯಾ, ಯುರೋಪ್​ನಲ್ಲಿ ಹರಡುತ್ತಿದೆ COVID Delta ರೂಪಾಂತರದ ಹೊಸ ತಳಿ

ಡೆಲ್ಟಾ ಪ್ಲಸ್​ ಭೀತಿ

ಕೊರೊನಾ ವೈರಸ್​ನ ಡೆಲ್ಟಾ ರೂಪಾಂತರದ ಹೊಸ ತಳಿ 'AY.4.2' ಅಥವಾ 'ಡೆಲ್ಟಾ ಪ್ಲಸ್' ಇಂಗ್ಲೆಂಡ್​​ನಲ್ಲಿ ಪತ್ತೆಯಾಗಿದೆ ಎಂದು ಬ್ರಿಟನ್​ ಆರೋಗ್ಯ ಇಲಾಖೆ ಮೊನ್ನೆಯಷ್ಟೇ ತಿಳಿಸಿತ್ತು. ಇದು ಡೆಲ್ಟಾ ರೂಪಾಂತರದಷ್ಟು ಪ್ರಬಲ ಎಂಬುದಕ್ಕೆ ಇನ್ನೂ ಯಾವುದೇ ಪುರಾವೆ ಇಲ್ಲ. ಆದರೆ ಇದು ವೇಗವಾಗಿ ಹರಡುತ್ತಿರುವುದರಿಂದ ಏಷ್ಯಾ, ಯುರೋಪ್​ನ ಅನೇಕ ರಾಷ್ಟ್ರಗಳಲ್ಲಿ ಕೋವಿಡ್​ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಹೇಳಲಾಗ್ತಿದೆ. ಭಾರತದಲ್ಲಿ ಈವರೆಗೆ ಡೆಲ್ಟಾ ಪ್ಲಸ್ ಪ್ರಕರಣ ಪತ್ತೆಯಾಗಿಲ್ಲವಾದರೂ, ಇದು ಹರಡದಂತೆ ತಡೆಯಲು ಕೇಂದ್ರ ಅರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ.

ABOUT THE AUTHOR

...view details